Tuesday, March 18, 2025
Homeಅಪಘಾತಶಿವರಾತ್ರಿಯಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಆನೆ ನಿಧನ

ಶಿವರಾತ್ರಿಯಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಆನೆ ನಿಧನ

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಶಿವರಾತ್ರಿಯಂದೇ ಮೃತಪಟ್ಟಿದೆ.

60ವರ್ಷ ಪ್ರಾಯದ ಲತಾ ಕಳೆದ 50 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಜಾತ್ರಾ ಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿದ್ದಳು.

ಧರ್ಮಸ್ಥಳದಲ್ಲಿ ಲಕ್ಷ್ಮಿ ಶಿವಾನಿ ಎಂಬ ಎರಡು ಆನೆಗಳಿವೆ. ಶಿವಾನಿಗೆ ಅಜ್ಜಿಯಂತೆ, ಲಕ್ಷ್ಮೀಗೆ ಲತಾ ಆನೆಯು ತಾಯಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಶಿವಾನಿಗೆ ಲಕ್ಷ್ಮಿ ಸ್ವಂತ ತಾಯಿಯಾದರೂ, ಲತಾ ಆನೆಯೊಂದಿಗೆ ಹೆಚ್ಚು ಸಲುಗೆಯನ್ನು ಹೊಂದಿತ್ತು. ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ. ಲತಾ ಆನೆಯ ಅಂತ್ಯ ಸಂಸ್ಕಾರ ಇಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular