Saturday, January 18, 2025
Homeಅಪರಾಧನಡುರಾತ್ರಿ ಕಳ್ಳ-ಪೊಲೀಸ್ ಸಿನಿಮೀಯ ಶೈಲಿಯ ಚೇಸಿಂಗ್: ಆಟೊದಿಂದ ತಳ್ಳಲ್ಪಟ್ಟರೂ ಆರೋಪಿಯನ್ನು ಸೆರೆ ಹಿಡಿದ ಎಎಸ್ ಐ

ನಡುರಾತ್ರಿ ಕಳ್ಳ-ಪೊಲೀಸ್ ಸಿನಿಮೀಯ ಶೈಲಿಯ ಚೇಸಿಂಗ್: ಆಟೊದಿಂದ ತಳ್ಳಲ್ಪಟ್ಟರೂ ಆರೋಪಿಯನ್ನು ಸೆರೆ ಹಿಡಿದ ಎಎಸ್ ಐ

ಬೆಂಗಳೂರು: ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕದಿಯುತ್ತಿದ್ದ ಆರೋಪಿಯನ್ನು ನಡುರಾತ್ರಿ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಪೊಲೀಸರು ಬಂಧಿಸಿದ್ದಾರೆ. ಎಚ್ ಎಸ್ ಆರ್ ಲೇಔಟ್ ಎಎಸ್ ಐ ಅವರು ಸಾಹಸ ಪ್ರದರ್ಶಿಸಿ ಕಳ್ಳನನ್ನು ಸೆರೆಹಿಡಿಯುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ. ಸೋಮವಾರ ಮಧ್ಯರಾತ್ರಿ 12-1ರ ನಡುವೆ ಎಚ್ ಎಸ್ ಆರ್ ಲೇಔಟ್ ಸೆಕ್ಟರ್ 6ರಲ್ಲಿ ಘಟನೆ ನಡೆದಿದೆ. ಬಂಧಿತನನ್ನು ಅಲ್ಲಾ ಬಕ್ಷ್ ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕದ್ದು ಆರೋಪಿ ಆಟೊದಲ್ಲಿ ಪರಾರಿಯಾಗುತ್ತಿದ್ದ. ಗಸ್ತು ತಿರುಗುತ್ತಿದ್ದ ಎಎಸ್ ಐ ಶಂಕರ್ ಇದನ್ನು ಗಮನಿಸಿದ್ದಾರೆ. ಕೂಡಲೇ ಹತ್ತಿರ ಹೋಗಿ ಪ್ರಶ್ನೆ ಮಾಡಿ ಆಟೊ ಹತ್ತಿದ್ದಾರೆ. ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ ರಿಕ್ಷಾವನ್ನು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಶಂಕರ್ ರಿಕ್ಷಾದಿಂದ ಕೆಳಗೆ ಬಿದ್ದಿದ್ದರೂ, ಎದ್ದು ರಿಕ್ಷಾವನ್ನು ಪಟ್ಟುಬಿಡದೆ ಹಿಡಿದು ಒಳಗೆ ನುಗ್ಗಿದ್ದಾರೆ. ಈ ವೇಳೆ ತಾವು ಗಾಯಗೊಂಡಿದ್ದರೂ ಮತ್ತೆ ರಿಕ್ಷಾ ಹತ್ತಿ ಆರೋಪಿ ತಪ್ಪಿಸಿಕೊಳ್ಳುವ ಯತ್ನವನ್ನು ವಿಫಲ ಮಾಡಿದ್ದಾರೆ. ಬಳಿಕ ತಮ್ಮ ಸಹೋದ್ಯೋಗಿಗಳ ನೆರವಿನೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular