Thursday, December 5, 2024
Homeಮಂಗಳೂರು“ಬಲೆ ತುಳು ಓದುಗ” ಅಭಿಯಾನಕ್ಕೆ ಚಾಲನೆ

“ಬಲೆ ತುಳು ಓದುಗ” ಅಭಿಯಾನಕ್ಕೆ ಚಾಲನೆ


ಮಂಗಳೂರು: ಬರೆಯುವ ಜೊತೆಗೆ ಓದಿಸುವ ಕೆಲಸ ನಡೆಯಬೇಕಾದದ್ದು ಅಗತ್ಯ. ಈ ನಿಟ್ಟಿನಲ್ಲಿ ತುಳು ಅಕಾಡೆಮಿಯು ಆಯೋಜಿಸಿರುವ “ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ” ಕಾರ್ಯಕ್ರಮ ಅತ್ಯಂತ ಸಕಾಲಿಕ ಹಾಗೂ ಮೌಲಿಕ ಕಾರ್ಯಕ್ರಮವಾಗಿದೆ. ಎಂದು ತುಳು ವಿದ್ವಾಂಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಅಭಿಪ್ರಾಯಪಟ್ದರು.
ಅವರು ಮಂಗಳೂರು ಉರ್ವಸ್ಟೋರ್‌ನ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡ “ಅಕಾಡೆಮಿಡ್ ಒಂಜಿದಿನ : ಬಲೆ ತುಳು ಓದುಗ” ಅಭಿಯಾನದ ಉದ್ಘಾಟನೆ ನೇರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು.
ಒಂದು ಕಾಲದಲ್ಲಿ ತುಳು ಕೇಳುವ ಹಾಗೂ ಮಾತುಕತೆಯ ಭಾಷೆಯಾಗಿತ್ತು. 16ನೇ ಶತಮಾನದ ಬಳಿಕ ಓದುವ ಪರಂಪರೆ ಆರಂಭಗೊAಡಿತು, 19ನೇ ಶತಮಾನದ ಆರಂಭದಲ್ಲಿ ಬಾಸೆಲ್ ಮಿಶನ್ ನವರು ತುಳುವಿನ ಪುಸ್ತಕಗಳ ಮುದ್ರಣಕ್ಕೆ ಆದ್ಯತೆ ನೀಡಿದ ಬಳಿಕ ತುಳು ಬರೆಯುವ ಹಾಗೂ ಓದುವ ಪರಂಪರೆ ವಿಸ್ತಾರಗೊಂಡಿತು ಎಂದು ಶಿವರಾಮ ಶೆಟ್ಟಿ ಅವರು ಹೇಳಿದರು.
ತುಳುವಿನ ಓದು ಅಂದರೆ ಅದು ತುಳು ಬದುಕಿನ ಓದು. ಈ ಓದು ನಮ್ಮಲ್ಲಿ ಜ್ಞಾನ, ಕುತೂಹಲದ ಬಗ್ಗೆ ಪ್ರಶ್ನೆ ಮೂಡಿಸುವುದು. ತುಳುವಿಗೆ ಒಂದು ತಾಕತ್ತು, ತಮೇರಿ ನೀಡುವ ಸಲುವಾಗಿ ಬರೆಯುವ ಹಾಗೂ ಓದುವ ಪರಂಪರೆಯನ್ನು ಮುಂದಕ್ಕೆ ಕೊಂಡೋಯ್ಯಬೇಕಾಗಿದೆ ಎಂದು ಪ್ರೊ. ಬಿ. ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ತುಳುವಿನ ಬದುಕೆಂದರೆ ಅದು ಪ್ರಕೃತಿಗೆ ಗೌರವ, ನಿಸರ್ಗ ಮೌಲ್ಯಕ್ಕೆ ಆದ್ಯತೆ ಹಾಗೂ ಮನ್ನಣೆ ನೀಡುವ ಪರಂಪರೆ. ತುಳು ಎಲ್ಲರನ್ನೂ ಒಳಗೊಳ್ಳವ ಹಾಗೂ ಎಲ್ಲರನ್ನೂ ಕರೆಸಿಕೊಳ್ಳುವ ವಿಶಾಲ ಮನೋಭಾವವನ್ನು ಹೊಂದಿದೆ. ನಿಸರ್ಗದತ್ತವಾಗಿ ತುಳುವಿನ ಬಣ್ಣ ಕೆಂಪು ಮತ್ತು ಬಿಳಿ, ಅದು ಸೂರ್ಯನ ಕೆಂಪು, ಈ ಕಾರಣಕ್ಕಾಗಿ ಸೂರ್ಯ ಚಂದ್ರರ ಉಲ್ಲೇಖ ಇರುವಂತಹದು. ಈ ಬಣ್ಣಗಳು ತುಳುವಿನ ನೈಜ ಆಸ್ಮಿತೆ ಕೂಡ ಆಗಿದೆ. ಇದು ಬದಲಾಗದಂತೆ ನೋಡಿಕೊಳ್ಳವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ತುಳುವಿನ ಜ್ಞಾನ ಪರಂಪರೆ ಹೊಸ ತಲೆಮಾರಿಗೆ ವರ್ಗಾವಣೆಯಾಗಬೇಕಿದ್ದರೆ ತುಳುವಿನ ಓದು ಅಗತ್ಯ ಎಂದು ಪ್ರೊ.ಬಿ. ಶಿವರಾಮ ಶೆಟ್ಟಿ ಅವರು ಹೇಳಿದರು.
“ ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ” ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ತುಳು ಅಧ್ಯಯನ ಕೇಂದ್ರದ 38 ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಭಾಷೆ, ಸಂಸ್ಕೃತಿ ಬಗ್ಗೆ ಅಗಾಧವಾದ ಪುಸ್ತಕ ಭಂಡಾರವು ಅಕಾಡೆಮಿಯ ಗ್ರಂಥಾಲಯದಲ್ಲಿದೆ. ವಿದ್ಯಾರ್ಥಿ ಯುವ ಜನರಲ್ಲಿ ತುಳು ಓದಿನ ಅಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ಅಕಾಡೆಮಿಯ ಬಲೆ ತುಳು ಓದುಗ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ನಿವೃತ್ತ ಪತ್ರಗಾರ ಸಹಾಯಕ ಬೆನೆಟ್ ಅಮ್ಮನ್ನ , ಆಳ್ವಾಸ್ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈಕೋಡಿ ಅವರು ಶುಭಕೋರಿ ಮಾತನಾಡಿದರು.
ತುಳು ಅಕಾಡೆಮಿ ರಿಜಿಸ್ಟಾçರ್ ಪೂರ್ಣಿಮಾ ಅವರು ಸ್ವಾಗತಿಸಿದರು, ತುಳು ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು.

RELATED ARTICLES
- Advertisment -
Google search engine

Most Popular