ಬೆಳಗಾವಿ: ಭಾರತದ ಪ್ರಮುಖ ಸಿಮೆಂಟ್ ಕಂಪನಿ ಆಗಿರುವ ದಾಲ್ಮೀಯಾ ಸಿಮೆಂಟ್ (ಭಾರತ್) ಲಿಮಿಟೆಡ್ ‘ರೂಫ್, ಕಾಲಮ್, ಫೌಂಡೇಶನ್ (ಆರ್‌ಸಿಎಫ್) ಎಕ್ಸ್ ಪರ್ಟ್’ ಎಂಬ ಹೆಸರಿನ ಮೂಲಕ ತನ್ನ ಹೊಸ ಸಿಮೆಂಟ್ ಉತ್ಪನ್ನ ಶ್ರೇಣಿಯನ್ನು ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ.
ಪ್ರಸ್ತುತ ಹೊಸ ಉತ್ಪನ್ನಗಳಾದ ದಾಲ್ಮೀಯಾ ಡಿಎಸ್‌ಪಿ ಆರ್‌ಸಿಎಫ್ ಎಕ್ಸ್ ವರ್ಟ್ ಮತ್ತು ದಾಲ್ಮೀಯಾ ಸಿಮೆಂಟ್ (ಡಿಸಿ) ಆರ್‌ಸಿಎಫ್ ಎಕ್ಸ್ ಪರ್ಟ್ ಬಿಡುಗಡೆ ಆಗಿದ್ದು, ಈ ಉತ್ಪನ್ನಗಳನ್ನು ಈ ಕಾಲದ ನಿರ್ಮಾಣ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಹೊಸ ಫಾರ್ಮುಲೇಷನ್ ಮತ್ತು ಅತ್ಯಾಧುನಿಕ ನ್ಯಾನೋ ಬಾಂಡಿಂಗ್ ತಂತ್ರಜ್ಞಾನ (ಎನ್‌ಬಿಟಿ) ಬಳಸಿ ತಯಾರಿಸಲಾಗಿದೆ.
ಆರ್‌ಸಿಎಫ್ ಎಕ್ಸ್ ಪರ್ಟ್ ಶ್ರೇಣಿಯ ಉತ್ಪನ್ನಗಳು ಹೆಚ್ಚಿನ ಶಕ್ತಿ, ಉತ್ತಮ ತುಕ್ಕು ನಿರೋಧಕ ಸಾಮರ್ಥ್ಯ ಮತ್ತು ಕಾಲದ ಪರೀಕ್ಷೆಯಲ್ಲಿಯೂ ಗಟ್ಟಿಯಾಗಿ ನಿಲ್ಲಬಲ್ಲ ಶಕ್ತಿ ಸಾಮರ್ಥ್ಯ ಹೊಂದಿದೆ. ದಾಲ್ಮೀಯಾ ಸಿಮೆಂಟ್ (ಡಿಸಿ) 80 ವರ್ಷಗಳ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿರುವ ಈ ಸಂಸ್ಥೆಯ ಮಾತೃ ಬ್ರಾಂಡ್ ಆಗಿದ್ದು, ಅದರ ಸ್ಥಿರ ಗುಣಮಟ್ಟ ಮತ್ತು ನಂಬಿಕಾರ್ಹತೆಗೆ ಹೆಸರಾಗಿದೆ. ನಿರ್ಮಾಣ ಕ್ಷೇತ್ರದ ವೈವಿಧ್ಯಮಯ ಅಗತ್ಯಗಳಿಗೆ ಆದ್ಯತೆಯ ಆಯ್ಕೆಯಾಗಿದೆ.
ಪ್ರಸ್ತುತ ಬಿಡುಗಡೆ ಮಾಡಲಾಗಿರುವ ಶ್ರೇಣಿಯಲ್ಲಿ ದಾಲ್ಮೀಯಾ ಡಿಎಸ್‌ಪಿ ರ್ಆಸಿಎಫ್ + ಪ್ರೀಮಿಯಂ ಉತ್ಪನ್ನವಾಗಿದ್ದು, ಇದನ್ನು ಅಲ್ಟಿಮೇಟ್ ಕಾಂಕ್ರೀಟ್ ಎಕ್ಸ್ ಪರ್ಟ್ ಎಂದು ಹೆಸರಿಸಲಾಗಿದೆ. ಎನ್‌ಬಿಟಿ ಮತ್ತು ಹೈ ರಿಯಾಕ್ಟಿವ್ ಸಿಲಿಕಾ ಹಾಗೂ ಪೋರ್ ರಿಡಕ್ಷನ್ ಟೆಕ್ನಾಲಜಿ (ಪಿಆರ್‌ಟಿ) ಬಳಸಿಕೊಂಡು ಈ ಉತ್ಪನ್ನ ಸಿದ್ಧಗೊಳಿಸಲಾಗಿದೆ. ಛಾವಣಿಗಳು ಮತ್ತು ಅಡಿಪಾಯಗಳನ್ನು ಹಾಕಲು ಸೂಕ್ತವಾಗಿದ್ದು, ಅತ್ಯುನ್ನತ ಶಕ್ತಿ ಹೊಂದಿದೆ ಮತ್ತು ಬಾಳಿಕೆ ಬರುತ್ತದೆ. ನಿರ್ಮಾಣದಲ್ಲಿ ಸಂದರ್ಭದಲ್ಲಿ ನಿಖರತೆ ಹೊಂದಲು ನಿರ್ಮಾಣ ಹಂತದ ಸೈಟ್ ಗಳಲ್ಲಿ ದಾಲ್ಮೀಯಾ ಸಿಮೆಂಟ್ ನ ಆರ್‌ಸಿಎಫ್ ಸಲಹೆಗಾರರ ತಂಡವು ಮಾರ್ಗದರ್ಶನವನ್ನು ನೀಡಲಿದೆ ಎಂಬುದು ವಿಶೇಷವಾಗಿದೆ.
ದೇಶಾದ್ಯಂತ 50000ಕ್ಕೂ ಹೆಚ್ಚು ಚಾನಲ್ ಪಾಲುದಾರರನ್ನು ಹೊಂದಿರುವ ದಾಲ್ಮೀಯಾ ಸಿಮೆಂಟ್ ಅತ್ಯುತ್ತಮ ನೆಟ್ವರ್ಕ್ ಹೊಂದಿದೆ. ಈ ಹೊಸ ಉತ್ಪನ್ನ ಅನಾವರಣ ಕಾರ್ಯಕ್ರಮದಲ್ಲಿ ದಾಲ್ಮೀಯಾ ನೆಟ್ ವರ್ಕ್ ನ ಪ್ರಮುಖರು, ಪ್ರಮುಖ ವಿತರಕರು, ಗುತ್ತಿಗೆದಾರರು ಮತ್ತು ನಿರ್ಮಾಣ ಕಾರ್ಯ ನಡೆಸುವವರು ಪಾಲ್ಗೊಂಡಿದ್ದರು. ನಿರ್ಮಾಣ ಕ್ರಮಗಳು ಬದಲಾಗುತ್ತಲೇ ಇರುವುದರಿಂದ ಮನೆ ನಿರ್ಮಿಸುವವರು ಈಗ ಅತ್ಯಾಧುನಿಕ ವೈಶಿಷ್ಟ್ಯಗಳಾದ ವೇಗದ ಸೆಟ್ಟಿಂಗ್ ಸಮಯ, ಉತ್ತಮ ಕಾರ್ಯ ನಿರ್ವಹಣೆ ಮತ್ತು ಪರಿಸರ ಒಡ್ಡುವ ಸವಾಲುಗಳನ್ನು ಎದುರಿಸುವ ಉತ್ತಮ ಪ್ರತಿರೋಧವನ್ನು ಒದಗಿಸುವ ಉತ್ಪನ್ನವನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ ದಾಲ್ಮೀಯಾ ಸಿಮೆಂಟ್ ಸಂಸ್ಥೆಯು ಅನಾವರಣ ಕಾರ್ಯಕ್ರಮದಲ್ಲಿ ಆನ್ ಗೌಂಡ್ ಆಕ್ಟಿವೇಶನ್ ಗಳು ಮತ್ತು ಸಂವಹನಗಳ ಮೂಲಕ ಆರ್‌ಸಿಎಫ್ ಎಕ್ಸ್ ವರ್ಟ್ ರೇಂಜ್ ನ ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ತಿಳಿಸುವ ಕೆಲಸ ಮಾಡಿತು. ಶಕ್ತಿ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡುವ ಉತ್ಪನ್ನಗಳನ್ನು ಒದಗಿಸುವ ದಾಲ್ಮೀಯಾ ಸಿಮೆಂಟ್ ನ ಬದ್ಧತೆಯನ್ನು ಸಾರಲಾಯಿತು. “ಆರ್‌ಸಿಎಫ್ ಸ್ಟ್ರಾಂಗ್ ತೋ ಘರ್ ಸ್ಟ್ರಾಂಗ್” ಎಂಬ ನಂಬಿಕೆಗೆ ಪೂರಕವಾಗಿ ಕಂಪನಿಯು ಅತ್ಯುತ್ತಮವಾದ, ಬಲವಾದ ಮನೆಗಳನ್ನು ನಿರ್ಮಿಸುವ ತನ್ನ ಉದ್ದೇಶ ಸಾಕಾರದ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಕಂಪನಿಯು ಪ್ರಾಬಲ್ಯ ಮುಂದುವರೆಸಿದ್ದು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಾದ್ಯಂತ 17421ಕ್ಕೂ ಹೆಚ್ಚು ಚಾನಲ್ ಪಾಲುದಾರರ ಸದೃಢ ನೆಲೆಯನ್ನು ಹೊಂದಿದೆ.