Sunday, July 14, 2024
Homeಉಡುಪಿಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದ ಪಾಯಸ ಸೇವೆಗೆ ಚಾಲನೆ

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದ ಪಾಯಸ ಸೇವೆಗೆ ಚಾಲನೆ

ಶ್ರೀ ಕ್ಷೇತ್ರ ಶಂಕರಪುರದ ಮಠ ಹಾಗೂ ಟ್ರಸ್ಟ್ ವತಿಯಿಂದ ನಡೆಯುವ 2024-25 ನೇ ಸಾಲಿನ ಶಾಲಾ ಮಕ್ಕಳಿಗೆ ಗುರುವಾರ ಪಾಯಸ ಸೇವೆಗೆ ಚಾಲನೆ ನೀಡಲಾಯಿತು. 20-06-2024ರ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ ಪ್ರತಿ ಗುರುವಾರದಂದು ಶಾಲಾ ಮಕ್ಕಳಿಗೆ ನೀಡುವ ಪಾಯಸ ಸೇವೆಗೆ ವಿಶ್ವೇಶ ತೀರ್ಥ ವಿದ್ಯಾಲಯ, ಕೈಪುಂಜಾಲ್ ನಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿಯ ಧರ್ಮದರ್ಶಿ ಹಾಗೂ ಶ್ರೀ ಕ್ಷೇತ್ರ ಶಂಕರಪುರದ ಸಲಹೆಗಾರ ದಯಾನಂದ ಹೆಜಮಾಡಿ, ಗೀತಾಂಜಲಿ ಎಮ್. ಸುವರ್ಣ, ಶಾಲಾ ಅಧ್ಯಕ್ಷರಾದ ಸತೀಶ್ ಕುಂದರ್ , ಕಾರ್ಯದರ್ಶಿ ರಮೇಶ್ ಪೂಜಾರಿ, ಟ್ರಸ್ಟಿ ರವಿ ಕುಮಾರ್ ಮಂದಾರ ಕಾಪು, ಮುಖ್ಯ ಶಿಕ್ಷಕ ಸಾಕ್ಷಾತ್ ಯು.ಕೆ ಮತ್ತು ಶಿಕ್ಷಕರು ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular