Saturday, July 20, 2024
HomeUncategorizedತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಗಾರದ ಮಾಸಾಚರಣೆಗೆ ಚಾಲನೆ

ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಗಾರದ ಮಾಸಾಚರಣೆಗೆ ಚಾಲನೆ

 ಕಾರ್ಕಳ:  ಕ್ಷೇ.‌ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು ಬೈಲೂರ್ ವಲಯದ  ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ನಲ್ಲಿ  ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜಿನ ಪಪ್ರಾಂಶುಪಾಲರಾದ ನಾಗರಾಜ್ ವಹಿಸಿದ್ದರು. 

ಇವರು ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತುಂಬಾ ಖುಷಿಯಾಗಿದೆ. ನಮ್ಮ ಮಕ್ಕಳಿಗೆ ಉಪಯುಕ್ತ ಮಾಹಿತಿ ಸಿಗುವಂತಾಗಿದೆ. ಮುಂದೆಯೂ ಈ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳುವುದಾದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ನುಡಿದರು.               ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆಯವರು ಉದ್ಘಾಟನೆ ನೆರವೇರಿಸಿ.        

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಹದಿಹರೆಯದ ಮಕ್ಕಳ ಪಾತ್ರ ಬಹಳ ಮುಖ್ಯವಾದದ್ದು.                   ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಿಮ್ಮ ಧ್ಯೇಯ ವಾಕ್ಯ ಆಗಬೇಕು ಎಂದು ನುಡಿದರು.      

ಕಾರ್ಯಕ್ರಮದಲ್ಲಿ ಆಗಮಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಕಚೇರಿ ಉಡುಪಿ,ಇಲ್ಲಿಯ ಯೋಜನಾಧಿಕಾರಿಗಳಾದ  ಗಣೇಶ್ ಆಚಾರ್ಯ ರವರ ಮಾತನಾಡುತ್ತಾ ಸಪ್ತ ವ್ಯಸನಗಳಲ್ಲಿ ದುಶ್ಚಟವು ಮೊದಲ ಮೆಟ್ಟಿಲಾಗಿದ್ದು, ಆ ಮೆಟ್ಟಿಲು ಜಾರಿದರೆ ಜೀವನದ ಎಲ್ಲಾ ಮೆಟ್ಟಿಲು ಜಾರಿದಂತೆ.  ಅದೇ ರೀತಿ “ಆರೋಗ್ಯಕರ ದೇಹವು ಆತ್ಮಕ್ಕೆ ಅರಮನೆ, ಅನಾರೋಗ್ಯಕರ ದೇಹವು ಆತ್ಮಕ್ಕೆ ಸೆರೆಮನೆ” ಎನ್ನುವ ಸಂದೇಶ ತಿಳಿಸಿದರು.  ದುಶ್ಚಟಕ್ಕೆ ಬಲಿಯಾದವರ ಮನೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಸಿ, ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.   

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು   ಯೋಜನಾಧಿಕಾರಿಯವರಾದ  ಹೇಮಲತಾ , ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ತ್ರಿವಿಕ್ರಮ ಕಿಣಿ, ಜನಜಾಗೃತಿ ವೇದಿಕೆಯ ಹಿರಿಯ ಸದಸ್ಯರಾದ  ಕಮಲಾಕ್ಷ ನಾಯಕ್, ಜಿಲ್ಲಾ ಜಾಗೃತಿ ಸದಸ್ಯರಾದ ತಾರಾನಾಥ್ ಶೆಟ್ಟಿ, ಮಾಲಿನಿ ಜೆ ಶೆಟ್ಟಿ, ರವೀಂದ್ರ ನಾಯಕ್ ನೀರೆ, ಕೇಂದ್ರ ಸಮಿತಿಯ ನೂತನ ಅಧ್ಯಕ್ಷರೂ, ಬೈಲೂರು ವಲಯದ ವಲಯಾಧ್ಯಕ್ಷರು ಆದ ಮಂಜುನಾಥ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಘಟಕ ಪ್ರತಿನಿಧಿ  ಸುನಿಲ್ ಹೆಗ್ಡೆ, ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶಾಲೆಯ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ನೀರೆ -ಬಿ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಪ್ರಸನ್ನ ಆಚಾರ್ಯ ರವರು ಸ್ವಾಗತಿಸಿದರು.                    ವಲಯದ ಮೇಲ್ವಿಚಾರಕರಾದ ಶ್ರೀಮತಿ ಯಶೋಧ ರವರು ನಿರೂಪಿಸಿ, ಧನ್ಯವಾದ ನೆರವೇರಿಸಿದರು.

 

                               

RELATED ARTICLES
- Advertisment -
Google search engine

Most Popular