ಮಂಗಳೂರು: 1837ನೇ ಇಸವಿಯಲ್ಲಿ ನಡೆದ ಐತಿಹಾಸಿಕ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕುರಿತು ಇಂಗ್ಲೆಂಡಿನ ವಸ್ತುಸಂಗ್ರಹಾಲಯಗಳಲ್ಲಿನ ದಾಖಲಾಧಾರಿತವಾಗಿ ಆಂಗ್ಲ ಭಾಷೆಯಲ್ಲೇ ಪ್ರಪ್ರಥಮ ಬಾರಿಗೆ ‘ರಿಕಾಲಿಂಗ್ ಅಮರ ಸುಳ್ಯ’ ಎಂಬ ಪುಸ್ತಕ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕವನ್ನು ಆಗಸ್ಟ್ 24ರಂದು ಸಂಜೆ 04:00 ಗಂಟೆಗೆ ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿರುವ ತುಳುಭವನದ ‘ಸಿರಿ ಚಾವಡಿ’ ಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ, ಶ್ರೀ ಪ್ರೇಮಾನಂದ ಶೆಟ್ಟಿಯವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಶ್ರೀ ದಯಾನಂದ ಜಿ‌. ಕತ್ತಲ್ ಸಾರ್ ಅವರು ವಹಿಸಿಕೊಳ್ಳಲಿದ್ದಾರೆ. ಸುಳ್ಯದ ಯುವ ಲೇಖಕ, ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಬರೆದಿರುವ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದ ಮುಖೇನ ವಸಾಹತುಶಾಹಿ ಧೋರಣೆ ವಿರೋಧಿಸಿ ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಕ್ರಾಂತಿಕಾರಿ ಚಳುವಳಿಗಳಲ್ಲಿ ಪ್ರಮುಖವಾದ 1837ರ ಅಮರ ಸುಳ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಂದಿನ ಪತ್ರಿಕಾ ಪ್ರಕಟಣೆಗಳು, CA¢£À ಪ್ರತ್ಯಕ್ಷದರ್ಶಿಗಳ‌ ಅಭಿಪ್ರಾಯಗಳು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಬ್ರಿಟೀಷರ ತೀರ್ಪು, vÀļÀÄ£Ár£À zÉñÀ¥ÉæëÄUÀ¼À §°zÁ£À CªÀgÀ£ÀÄß UÀ°èUÉÃj¸ÀĪÀ°è ©ænµÀgÀ PËægÀå ಹೀಗೇ ಈ ಐತಿಹಾಸಿಕ ಘಟನೆಯ ನಂತರದಲ್ಲಿ ಬ್ರಿಟಿಷರು ಇದನ್ನು ಶಾಶ್ವತವಾಗಿ ಮರೆಮಾಚಲು ಯತ್ನಿಸಿದ ರೀತಿಗಳು ಮತ್ತು ಭವಿಷ್ಯದಲ್ಲಿ ಕಾನೂನು ರಚನೆಯ ಮೇಲೆ ಈ ಪ್ರಭಾವದ ಕುರಿತು ಇನ್ನಷ್ಟು ಅನೇಕ ಬಹಿರಂಗಪಡಿಸುವಿಕೆಗಳು 185 ವರ್ಷಗಳ ನಂತರ ಸಾರ್ವಜನಿಕ ವಲಯಕ್ಕೆ ಬೆಳಕಿಗೆ ಬರಲಿವೆ. ಈ ಪುಸ್ತಕದ ಸಂಪೂರ್ಣ ವಿವರವನ್ನು ಖ್ಯಾತ ವಾಗ್ಮಿಗಳು, ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು ನೀಡಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಪೂಜ್ಯ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಕರ್ನಾಟಕ ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾಗಿರುವ ಕರ್ನಲ್ ಶರತ್ ಭಂಡಾರಿ ನಿಟ್ಟೆಗುತ್ತು ಇವರುಗಳು ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.