ಮಂಗಳೂರು: ಆಚರಣೆಯ ಧರ್ಮದ ಭಾಗವಾದರೆ, ‘ತುಳು ಭಾಷೆ’ ನಮ್ಮ ಸಂಸ್ಕೃತಿ ಭಾಗ, ಧಾರ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಒಟ್ಟು ಸೇರಿಸಿ ಆಯೋಜಿಸಿರುವ ಕುಣಿತ ಭಜನ ಕಾರ್ಯಕ್ರಮ ಅರ್ಥ ಪೂರ್ಣವಾದುದು ಎಂದು ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಹೇಳಿದರು.
“ಹುಳು ಕೂಟ ಕುಡದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆ ಯುವ ಸರಣಿ ಕಾರ್ಯಕ್ರಮದ ಭಾಗ ರವಿವಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ‘ತುಳು ಕುಣಿತ ಭಜನ ಸರ್ಧೆ 2023’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಳು ಭಾಷೆಯಲ್ಲಿ ಮಾತ ನಾಡು ವುದನ್ನು ನಾವು ನಮ್ಮ ಹಿರಿಯರಿಂದ ಕಲಿತಿದ್ದೇವೆ. ತುಳುನಾಡಿನಲ್ಲಿ ಹುಟ್ಟಿದ ನಮಗೆ ತುಳು ಭಾಷೆಯನ್ನು ಉಳಿಸುವ ಮಹತ್ವದ ಜವಾಬ್ದಾರಿಯಿದೆ. ಈ ಕೆಲಸ ಯಶಸ್ವಿಯಾಗಬೇಕಿದ್ದರೆ ನಾವು ನಮ್ಮ ಮಕ್ಕಳ ಮೂಲಕ ಮೊಮ್ಮಕ್ಕಳಿಗೆ ಭಾಷೆಯನ್ನು ಕಲಿಸಿಕೊಡಬೇಕು. ಅವರು ಕಲಿತು : ಮಾತನಾಡಲು ತೊಡಗಿದರೆ ಮುಂದಿನ ತಲೆಮಾರಿಗೆ ಉಳಿಯಲು ಸಾಧ್ಯ ಎಂದರು. ಭಾಷೆ ತ
ಭಜನೆ ದೇವರಿಗೆ ಅತ್ಯಂತ ಪ್ರಿಯ ಶ್ರೀ ಕ್ಷೇತ್ರ ಮಂಗಳಾದೇವಿಯ ವ ಆಡಳಿತ ಮೊಕ್ತಸರ ಪಿ. ರಮಾನಾಥ ಹೆಗ್ಡೆ ಮಾತನಾಡಿ, ಭಜನೆ ದೇವರಿಗೆ ಅತ್ಯಂತ ಪ್ರಿಯವಾದುದು. ಅದರಲ್ಲೂ ಕುಣಿತ ಭಜನೆ ಇಂದು ಹೆಚ್ಚು ಜನಪ್ರಿಯತೆ ಪಡೆದಿದೆ. ಸಾಕಷ್ಟು ಮಂದಿ ಯುವ ಸಮುದಾಯ . ಇದರಲ್ಲಿ ತೊಡಗಿಸಿ ಕೊಂಡಿದೆ. ಇದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ತುಳು ಭಾಷೆಯನ್ನು ಬೆಳೆಸುವಲ್ಲಿ ನೆರವಾಗಿದೆ ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷಧರ್ಮದರ್ಶಿ
ಹರಿಕೃಷ್ಣ ಪುನರೂರು ಮಾತನಾಡಿದರು. ತುಳು ಕೂಟದ ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಮೊದಲಾದವರಿದ್ದರು.
ಶೋಭಾ ಕೇಶವ ಸ್ವಾಗತಿಸಿ, ಉಪಾಧ್ಯಕ್ಷ 3.2. ಪಾಲ್ ಕಾರ್ಯದರ್ಶಿ ನಿರೂಪಿಸಿದರು. ರಾಕೇಶ್ ಡಾ| ಕುಮಾರ್ ವಂದಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಭಜನ ಶಿಕ್ಷಕರಾದ ರಮೇಶ್ ಕಲ್ಮಾಡಿ ಮತ್ತು ಕಲಾವಿದ ತೋನ್ಸೆ ಪುಷ್ಕಳ್ ಕುಮಾರ್ ಭಾಗವಹಿಸಿದ್ದರು. ವಿವಿಧ ಭಜನ ತಂಡಗಳು ಕುಣಿತ ಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.