ಪಾಡ್ಯಾರು ಶಾಲೆಯಲ್ಲಿ ಕಲಿಕೆಯ ಅರಿವು ಮತ್ತು ವಿವಿಧ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕಾರ್ಯಾಗಾರವು ಸೆ. 14 ರಂದು ನಡೆಯಿತು.
ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅರಿವು ಮತ್ತು ಕಲಿಕೆಯಲ್ಲಿ ಬಳಸಬಹುದಾದ ತಂತ್ರಜ್ಞಾನಗಳ ಬಗ್ಗೆ ನೇರಪ್ರಸಾರದಲ್ಲಿ ಮಾಹಿತಿಗಳನ್ನು ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಾದ ಪ್ರೀತಮ್ ಮತ್ತು ಮನಿಶ್ ಗಣಿತದ ಕ್ಲಿಷ್ಟಕರವಾದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಮಾಹಿತಿ ಪಡೆದರು. ಪಡುಮಾರ್ನಾಡು ಪಂಚಾಯತ್ ಗ್ರಂಥ ಪಾಲಕಿ ಶ್ರೀಮತಿ ವನಿತಾ ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ Shenoy ಸ್ವಯಂಸೇವಕ ಶಿಕ್ಷಕಿ ಶ್ರೀಮತಿ ಪ್ರತಿಭಾ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯ ಘಟಕ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು
ಪಾಡ್ಯಾರು ಶಾಲೆಯಲ್ಲಿ ಕಲಿಕೆಯ ಅರಿವು ಮತ್ತು ವಿವಿಧ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕಾರ್ಯಾಗಾರ
RELATED ARTICLES