ಕೈಕಂಬ: ಬೃಹತ್ ಲಾರಿಯೊಂದು ಬ್ರೇಕ್ ಫೇಲ್ ಆದ ಕಾರಣ ರಸ್ತೆ ಬದಿಯ ಅಂಗಡಿಗಳಿಗೆ ಗುದ್ದಿದ್ದಲ್ಲದೆ, ಖಾಸಗಿ ಬಸ್ಸು, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾದ ಘಟನೆ ಇಲ್ಲಿನ ಎಡಪದವವು ಪೇಟೆಯಲ್ಲಿ ನಡೆದಿದೆ. ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆದೆ. ಬ್ರೇಕ್ ಫೇಲ್ ಆದ ಲಾರಿಯ ಚಾಲಕ ಮತ್ತು ಅಪಘಾತಕ್ಕೀಡಾದ ಮತ್ತೊಂದು ಲಾರಿಯ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ.
ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿದ್ದ ಮೂರು ಅಂಗಡಿಗಳಿಗೆ ಭಾರಿ ಹಾನಿಯಾಗಿದೆ. ಲಾರಿ, ಖಾಸಗಿ ಬಸ್ಸು ಜಖಂಗೊಂಡಿದ್ದು, ರಸ್ತೆ ಬದಿಯಲ್ಲಿದ್ದ ನಾಲ್ಕು ಸ್ಕೂಟರ್ ಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿ ಪರಿಶೀಲಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.