Wednesday, January 15, 2025
Homeಬಂಟ್ವಾಳಚಿರತೆ ಹಾವಳಿ: ಡಿ. 30ರಂದು ಚೆನೈತ್ತೋಡಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಸಹಭಾಗಿತ್ವದಲ್ಲಿ ಜನಜಾಗೃತಿ...

ಚಿರತೆ ಹಾವಳಿ: ಡಿ. 30ರಂದು ಚೆನೈತ್ತೋಡಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಸಹಭಾಗಿತ್ವದಲ್ಲಿ ಜನಜಾಗೃತಿ ಸಭೆ

ಬಂಟ್ವಾಳ: ವಾಮದಪದವು ಪರಿಸರದ ಚೆನೈತ್ತೋಡಿ, ಎಲಿಯನಡು ಗೋಡು, ಅಜ್ಜಿ ಬೆಟ್ಟು ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹಲವು ಚಿರತೆಗಳು ರಾತ್ರಿ ಹೊತ್ತಿನಲ್ಲಿ ಜನಸಂದನಿ ಇರುವ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಘಟನೆಗಳು ನಡೆದಿವೆ, ಇದರಿಂದ ಜನ ಭಯ ಭೀತರಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಹಾಗೂ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಗ್ರಹಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕಾಡು ಪ್ರಾಣಿಗಳ ಕಾಟ ತಡೆಗಟ್ಟುದ್ದಕ್ಕಾಗಿ, ಜನರಲ್ಲಿ ಧೈರ್ಯ ತುಂಬುವ ಸಲುವಾಗಿ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಸಹಭಾಗಿತ್ವದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಅರಣ್ಯ ಇಲಾಖೆ ಯವರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ವೇದಿಕೆಯ ಸಹಭಾಗಿತ್ವದಲ್ಲಿ ನಿತ್ಯಾನಂದ ಮುಖ್ಯಪ್ರಾಣ ಭಜನಾ ಮಂದಿರದ ಎದುರುಗಡೆ ಗುರುನಗರ ಚೆನೈತ್ತೋಡಿ ಗ್ರಾಮದಲ್ಲಿ ಡಿ.30ರಂದು 9.30ಕ್ಕೆ ಸಭೆ ಸೇರಲು ನಿರ್ಧಾರಿಸಲಾಗಿದೆ.
ಈ ಸಭೆಗೆ ಗ್ರಾಮಸ್ಥರ ಒಗ್ಗಟ್ಟಿನ ಅಗತ್ಯವಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಮನವಿ ಮಾಡಿದೆ.ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದ ಪದವು ಘಟಕ ಪ್ರಮುಖರು ಹಾಗೂ ವೇಣೂರು ಉಪ ವಲಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್ ಕೆಎಸ್ ಭಾಗವಹಿಸಲಿರುವರು ಸರ್ವರೂ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡುವಂತೆ ತುಳುನಾಡ ರಕ್ಷಣಾ ವೇದಿಕೆ ವಿನಂತಿಸಿದೆ.

RELATED ARTICLES
- Advertisment -
Google search engine

Most Popular