Saturday, June 14, 2025
HomeUncategorizedಹಸಿರು ಕ್ರಾಂತಿಗೆ ಕೈ ಜೋಡಿಸೋಣ:  ಡಾ|| ಚೂಂತಾರು

ಹಸಿರು ಕ್ರಾಂತಿಗೆ ಕೈ ಜೋಡಿಸೋಣ:  ಡಾ|| ಚೂಂತಾರು

ದಿನಾಂಕ: 17-07-2024ನೇ ಭಾನುವಾರದಂದು ಸುರತ್ಕಲ್ ಘಟಕದ ವತಿಯಿಂದ  ಲೈಟ್ ಹೌಸ್ ಕೂಡಲೇ ತೀರದಲ್ಲಿ  ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಚಾಲನೆ ನೀಡಿ ಮಾತನಾಡಿ, ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ  ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ಧಾರಿ.ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಂಡು  ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ  ನೋಡಿಕೊಳ್ಳಬೇಕು. ಹಸಿರು ಕ್ರಾಂತಿಗೆ (ಗ್ರೀನ್ ರಿವಲ್ಯೂಷನ್) ಎಲ್ಲಾ ಗೃಹರಕ್ಷಕರು ಕಟಿಬದ್ಧರಾಗಬೇಕು. ಪ್ರತಿ ಗೃಹರಕ್ಷಕರು ವರ್ಷದಲ್ಲಿ ಕನಿಷ್ಟ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಿ ಪೋಷಿಸಬೇಕು. ಹಾಗಾದಲ್ಲಿ ಪರಿಸರದ ಸಮತೋಲನ ಉಂಟಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬಹುದು ಎಂದು  ಅಭಿಪ್ರಾಯ ಪಟ್ಟರು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಪರಿಸರ ರಕ್ಷಣೆ, ಗಿಡ ಮರಗಳ ಪೋಷಣೆ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್ಉ ಳ್ಳಾಲ ಘಟಕಾಧಿಕಾರಿ ಸುನಿಲ್, ಮಂಗಳೂರು ಘಟಕದ ರವಿಂದ್ರ, ಜ್ಞಾನೇಶ್, ಸಂಜಯ್, ಪುರುಷೋತ್ತಮ,ಸುರತ್ಕಲ್ ಘಟಕದ ಮನೋರಮಾ, ಲಲಿತ, ವನಿತಾ ಹಾಗೂ ಇತರ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular