ದಾವಣಗೆರೆ- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ 1991 ರಂದು ಸ್ಥಾಪನೆಯಾಗಿದ್ದು, ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಯಕ್ಷಗಾನ ಹೀಗೆ ಹತ್ತು ಹಲವು ಸಾಂಸ್ಕೃತಿಕ ಕಾಳಜಿಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಕೇರಳ ಸೇರಿದಂತೆ ವಿವಿಧ ಜಿಲ್ಲೆ, ಬಡಾವಣೆಗಳಲ್ಲಿ ಶಾಖೆಗಳನ್ನು ಹುಟ್ಟು ಹಾಕಿದ್ದೇವೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ವರ್ಷ ಪೂರ್ತಿ ನಿರಂತರ ಉಚಿತವಾಗಿ ಚಿತ್ರ ಬರೆಯುವ ಸ್ಪರ್ಧೆ, ಕವನ ಬರೆಯುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಥೆ ಬರೆಯುವ ಸ್ಪರ್ಧೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ವಿವಿಧ ರೀತಿಯ ಪ್ರಶಸ್ತಿಗಳು ವಿತರಣೆ ನಡೆಯಲಿದ್ದು ಅವಕಾಶ ವಂಚಿತ ಪ್ರತಿಭಾವಂತರಿಗೆ ಮೂಲೆ ಗುಂಪಾದ ನಾಲ್ಕು ಗೋಡೆಗೆ ಸೀಮಿತವಾದ ಹಿರಿಯರಿಗೆ, ಕಿರಿಯರಿಗೆ, ಮಹಿಳೆಯರಿಗೆ ಸೂಕ್ತ ಮುಕ್ತವಾದ ವೇದಿಕೆ ಕಲ್ಪಿಸುವ ಅವರುಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ, ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿಸುವ ಸದುದ್ದೇಶದಿಂದ ಈ ಸಂಸ್ಥೆಗೆ ಸಾರ್ವಜನಿಕರು ಆಜೀವ ಸದಸ್ಯರಾಗಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಪ್ರಕಟಿಸಿದ್ದಾರೆ. ಆಸಕ್ತರು 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.