Tuesday, May 13, 2025
Homeಉಡುಪಿಉಡುಪಿ | ತಾಲೂಕು ಕಚೇರಿ ಲಿಫ್ಟ್‌ ಬಂದ್‌; ಅರ್ಧ ಗಂಟೆ ಲಿಫ್ಟ್‌ನೊಳಗೇ ಸಿಲುಕಿದ ಸಾರ್ವಜನಿಕರು

ಉಡುಪಿ | ತಾಲೂಕು ಕಚೇರಿ ಲಿಫ್ಟ್‌ ಬಂದ್‌; ಅರ್ಧ ಗಂಟೆ ಲಿಫ್ಟ್‌ನೊಳಗೇ ಸಿಲುಕಿದ ಸಾರ್ವಜನಿಕರು

ಉಡುಪಿ: ವಿದ್ಯುತ್‌ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್‌ನಲ್ಲೇ ಸಿಲುಕಿದ ಘಟನೆ ಉಡುಪಿ ತಾಲೂಕು ಕಚೇರಿ ಕಟ್ಟಡದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿಯಲ್ಲಿ ಈ ದುರ್ಘಟನೆ ನಡೆದಿದೆ.
ತಾಲೂಕು ಕಚೇರಿಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣ ನಾಲ್ಕು ಮಂದಿ ಲಿಫ್ಟ್‌ನಲ್ಲಿ ಸಿಲುಕಿ ಅರ್ಧ ಗಂಟೆ ಪರದಾಡುವಂತಾಯಿತು ಎಂದು ತಿಳಿದುಬಂದಿದೆ. ಜನರೇಟರಿಗೆ ಇಂಧನವಿಲ್ಲದೆ ಲಿಫ್ಟ್‌ ಕಾರ್ಯಾಚರಣೆ ಸ್ಥಗಿತಗೊಂಡಿದೆ. ತಾಲೂಕು ಕಚೇರಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular