ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದಲ್ಲಿ 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಘು ವಿಮಾನವು ಅಂಗಡಿಗಳಿಗೆ ಅಪ್ಪಳಿಸಿದ್ದು, ಎಲ್ಲಾ 10 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನ ಪತನದ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ
ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 10 ಮಂದಿ ಪ್ರಯಾಣಿಕರೂ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿಯಂತ್ರಣ ಕಳೆದುಕೊಂಡ ವಿಮಾನವು ಹಲವಾರು ಕಟ್ಟಡಗಳಿಗೆ ಡಿಕ್ಕಿ ಹೊಡೆದು ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಬ್ರೆಜಿಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಘರ್ಷಣೆಯಿಂದ ಉಂಟಾದ ಬೆಂಕಿಯಿಂದಾಗಿ ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲಿದರು ಎಂದು ವರದಿಯಾಗಿದೆ. ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ಏಜೆನ್ಸಿಯ ಪ್ರಕಾರ, ಸಾವೊ ಪಾಲೊ ರಾಜ್ಯಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಬ್ರೆಜಿಲ್‌ನ ಉದ್ಯಮಿ ಲೂಯಿಸ್ ಕ್ಲೌಡಿಯೊ ಗಲೇಜಿ ಅವರು ವಿಮಾನವನ್ನು ಪೈಲಟ್ ಮಾಡಿದ್ದಾರೆ. 61 ವರ್ಷದ ಉದ್ಯಮಿ ತನ್ನ ಪತ್ನಿ, ಮೂವರು ಹೆಣ್ಣುಮಕ್ಕಳು, ಕುಟುಂಬದ ಇತರ ಸದಸ್ಯರು ಹಾಗೂ ತನ್ನ ಕಂಪನಿಯ ಸಹೋದ್ಯೋಗಿಗಳು ಸೇರಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ವಿಮಾನ ಅಪ್ಪಳಿಸಿ ಗಾಯಗೊಂಡಿರುವ ಸುಮಾರು 15 ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಅಪಘಾತಕ್ಕೀಡಾದ ಉದ್ಯಮಿ ಕುಟುಂಬಸ್ಥರು ಕ್ರಿಸ್ಮಸ್ ಆಚರಣೆಗಾಗಿ ಪ್ರವಾಸಿ ನಗರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಬ್ರೆಜಿಲ್‌ನಲ್ಲಿ ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ: 10 ಮಂದಿ ದುರ್ಮರಣ, 12 ಜನರಿಗೆ ಗಾಯ
RELATED ARTICLES