Tuesday, April 22, 2025
HomeUncategorizedಸಿದ್ದಾಪುರದಲ್ಲಿ ಲಿಂಗಮುದ್ರೆ ಕಲ್ಲು ಪತ್ತೆ

ಸಿದ್ದಾಪುರದಲ್ಲಿ ಲಿಂಗಮುದ್ರೆ ಕಲ್ಲು ಪತ್ತೆ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸಿದ್ದಾಪುರದ, ಸಿದ್ದಾಪುರ-ಹೊಸಂಗಡಿ ರೋಟರಿ ಕ್ಲಬ್, ಸಣ್ಣಯ್ಯ ಯಡಿಯಾಳ ಸಭಾಭವನದ ಮುಂಭಾಗವಿರುವ, ಅರವಿಂದ ಶೆಟ್ಟಿಯವರ ಸೈಟ್ ನಲ್ಲಿ ಈ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.

ಈ ಕಲ್ಲಿನ ಮಾಹಿತಿಯು, ಸಿದ್ದಾಪುರ ವಾಸುಕಿ ಕ್ಲಿನಿಕ್ ಡಾ. ಜಗದೀಶ್ ಶೆಟ್ಟಿಯವರಿಂದ ತಿಳಿದು ಬಂದ ಹಿನ್ನಲೆಯಲ್ಲಿ ತುಮಕೂರು ವಿ.ವಿಯ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಸಿದ್ದಾಪುರ, ಇವರು ಸ್ಥಳಕ್ಕೆ ಭೇಟಿ ನೀಡಿ, ಮುಳ್ಳು ಗಿಡಗಳಿಂದ ಅವರಿಸಿದ್ದ ಈ ಕಲ್ಲನ್ನು, ರೋಟರಿ ಮಾಜಿ ಅಧ್ಯಕ್ಷರಾಗಿದ್ದ ಡಿ ನಾಗೇಂದ್ರ ಯಡಿಯಾಳ ಹಾಗೂ ಶಿಕ್ಷಕಿ ಕೃಷ್ಣವೇಣಿಯವರ ಸಹಾಯದಿಂದ ಈ ಕಲ್ಲಿನ ಸುತ್ತಮುತ್ತ ಸ್ವಚ್ಛಗೊಳಿಸಿ ಕಲ್ಲನ್ನು ಪರೀಕ್ಷಿಸಲಾಗಿ ಈ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಅದರ ಕೆಳಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವುದು ಕಂಡು ಬಂದಿದೆ. ಈ ಕಲ್ಲು ಸುಮಾರು ಎರಡುವರೆ ಅಡಿ ಎತ್ತರವಿದ್ದು, ಒಂದು ಅಡಿ ಅಗಲವಿದೆ, ಸುಮಾರು ಎರೆಡು ಅಡಿ ಆಳ ಕೆಳಗೆ ಇದ್ದಿರಬಹುದು. ಈ ಭಾಗದಲ್ಲಿ ಈ ಕಲ್ಲನ್ನು ಶಿಲೆಕಲ್ಲು ಎಂದು ಕರೆಯುತ್ತಾರೆ.ಈ ಕಾರ್ಯಕ್ಕೆ ಸ್ವಾದ ಹೋಟೆಲ್ ನ ಗಣೇಶ್ ಶೆಟ್ಟಿಯವರು ಜೊತೆಗೂಡಿದ್ದಾರೆ.

ಶಾಸನ ತಜ್ಞರಾದ ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು, DOSR ಇತಿಹಾಸ ಮತ್ತು ಪುರಾತತ್ವ ವಿಭಾಗ ತುಮಕೂರು ವಿ.ವಿ ಇವರಿಗೆ ತಿಳಿಸಲಾಗಿ,
ಈ ಕಲ್ಲಿನಲ್ಲಿ ಯಾವುದೇ ಬರವಣಿಗೆ ಕಂಡುಬಂದಿಲ್ಲ. ತಮ್ಮ ಗಡಿಗಳನ್ನು ಗುರುತಿಸಲು ಶೈವರು ಲಿಂಗ ಮುದ್ರೆ ಕಲ್ಲನ್ನು, ವೈಷ್ಣವರು ವಾಮನ ಮುದ್ರೆ ಕಲ್ಲನ್ನು ಹಾಗೂ ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕಿಸುತ್ತಿದ್ದರು. ಇದು ಲಿಂಗ ಮುದ್ರೆ ಕಲ್ಲಾಗಿದೆ.

ಐತಿಹಾಸಿಕ ಮಹತ್ವದ ಸಿದ್ದಾಪುರದಲ್ಲಿ, ಕೆಳದಿಯ ಅರಸ ಎರಡನೇ ಬಸವಪ್ಪನಾಯಕನು ಸಿದ್ದಾಪುರದ ಪೇಟೆಯ ಸಮೀಪದ ಪ್ರದೇಶದವೊಂದಕ್ಕೆ ಮಂತ್ರರಾಜಪುರ ಎಂದು ಹೆಸರಿಟ್ಟು, ಷಡಕ್ಷರಯ್ಯನ ಮೂಲಕ ಅಲ್ಲಿ ಅತ್ಯದ್ಭುತವಾದ ಮಠವನ್ನು ಕಟ್ಟಿಸಿ, ವಿಶೇಷ ಭೂ ಉಂಬಳಿ ಬಿಡುತ್ತಾನೆ. ಶಿವಜಂಗಮ ಧರ್ಮಾರ್ಥವಾಗಿ ಗುರು ನಂಜುಂಡಸ್ವಾಮಿಗಳಿಗೆ ಮಠವನ್ನು ಧಾರೆಯೆರೆದು ಶಾಸನ ಬರೆಸುತ್ತಾನೆಂಬುದು ಕೆಳದಿ ನೃಪವಿಜಯದಿಂದ ತಿಳಿಯುತ್ತದೆ. ಆ ಮಠದ ಗಡಿಯ ಒಂದು ಭಾಗ ಈ ಪ್ರದೇಶವಾಗಿರಬಹುದು, ಎರಡನೇ ಬಸವಪ್ಪ ನಾಯನ ಕಾಲದಲ್ಲಿ ಈ ಮಠದ ಗಡಿಯನ್ನು ಗುರುತಿಸಲು ಈ ಲಿಂಗಮುದ್ರೆ ಕಲ್ಲನ್ನು ನೆಟ್ಟಿರಬಹುದು ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ ಹಾಗೂ ಕೆಳದಿ ಅರಸ ಎರಡನೇ ಬಸವಪ್ಪ ನಾಯಕನು ಸಿದ್ದಾಪುರದಲ್ಲಿ ಹಾಕಿಸಿದ ಶಾಸನದ ಶೋಧಕಾರ್ಯದ ಅಗತ್ಯತೆಯ ಕುರಿತು ಹೇಳಿದ್ದಾರೆ

ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಇವರು ಮಂತ್ರರಾಜಪುರವನ್ನು ತಮ್ಮ ಕೃತಿ ಯಾದ ಸಿದ್ದಾಪುರ: ಒಂದು ಸಾಂಸ್ಕೃತಿಕ ಅಧ್ಯಯನ ಕೃತಿಯಲ್ಲಿ ಇಂದಿನ ಸಿದ್ದಾಪುರದ ಕೆಳಪೇಟೆಯೇ ಮಂತ್ರರಾಜಪುರವೆಂಬುದಾಗಿ ಗುರುತಿಸಿದ್ದಾರೆ.

RELATED ARTICLES
- Advertisment -
Google search engine

Most Popular