ಬಪ್ಪನಾಡು ಕಿನ್ನಿಗೋಳಿ ದ.ಕ.ಜಿ.ಪ. ಸರಕಾರಿ ಪ್ರೌಢಶಾಲೆ ನಡುಗೋಡು ಇಲ್ಲಿಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಎರಡು ಗಣಕಯಂತ್ರಗಳ ಕೊಡುಗೆ ನೀಡಲಾಯಿತು.ಈ ಸಂದರ್ಭ ಲಯನ್ಸ್ ಜಿಲ್ಲೆ 317ಡಿ ಯ ರಾಜ್ಯಪಾಲರಾದ ಲಯನ್ ಬಿಎಮ್ ಭಾರತಿ ಯವರು ಮಕ್ಕಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ತಮ್ಮ ಪ್ರಾಂತ್ಯದಲ್ಲಿ ಅತ್ಯಂತ ಉತ್ತಮ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದು ಈ ದಿನ ವಿಶೇಷವಾಗಿ ಸರಕಾರಿ ಶಾಲೆಗೆ ಆಂಗ್ಲಮಾಧ್ಯಮ ಶಾಲೆಗಳೊಂದಿಗೆ ಪೈಪೋಟಿ ನೀಡಲು ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಅತಿ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಲಯನ್ಸ್ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ಗಣಕಯಂತ್ರಗಳನ್ನು ನಡುಗೋಡು ಸರಕಾರಿ ಶಾಲೆಗೆ ನೀಡಿದ್ದು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಮುಂದಿನ ದಿನಗಳಲ್ಲಿ ಉದ್ಯೋಗ ಅಥವಾ ಉದ್ಯಮಿ ಯಾದಲ್ಲಿ ತಮ್ಮ ಸಂಪತ್ತಿನ ಒಂದು ಭಾಗವನ್ನು ಸರಕಾರಿ ಶಾಲೆಗಳಿಗೆ ಹಾಗೂ ಸಮಾಜದ ಬಡ ಜನರಿಗೆ ನೀಡಬೇಕಾಗಿ ಕರೆ ನೀಡಿದರು.
ಈ ಸಂದರ್ಭ ಸಂಪುಟ ಕಾರ್ಯದರ್ಶಿ ಲಯನ್ ಗೀತಾ ರಾವ್ , ವಲಯ ಅಧ್ಯಕ್ಷರಾದ ರೋಷನ್ ಡಿಸೋಜಾ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷ ರಾದ ಶಿವಪ್ರಸಾದ್, ಸ್ಥಾಪಕ ಅಧ್ಯಕ್ಷರು ಹಾಗೂ ಪ್ರಾಂತ್ಯ ಅಧ್ಯಕ್ಷರು ಪ್ರಾಂತ್ಯ 11 ಲಯನ್ ವೆಂಕಟೇಶ್ ಹೆಬ್ಬಾರ್, ಕಾರ್ಯದರ್ಶಿ ಲಯನ್ ಪ್ರತಿಭಾ ಹೆಬ್ಬಾರ್, ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟ , ಕೋಶಾಧಿಕಾರಿ ಅನಿಲ್ ಕುಮಾರ್, ಲಯನ್ ಭಾಸ್ಕರ್ ಕಾಂಚನ್, ಲಿಯೋ ಅಧ್ಯಕ್ಷರಾದ ಮೊಹಮ್ಮದ್ ಜಿಸನ್ ಕಾರ್ಯದರ್ಶಿ ಮಹಮ್ಮದ್ ಸಲಿತ್, ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಆಚಾರ್ಯ, ಮುಖ್ಯ ಶಿಕ್ಷಕಿ ಶಾಂತಿ ಭಟ್ ಮುಂತಾದವರು ಉಪಸ್ಥಿತರಿದ್ದರು.