Wednesday, February 19, 2025
Homeಧಾರ್ಮಿಕಕಾಟಿಪಳ್ಳ : ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಕಾಟಿಪಳ್ಳ : ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಅಮೃತ ಪ್ರಕಾಶ ಪತ್ರಿಕೆ ಹಾಗೂ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇವರ ಸಹಯೋಗದಲ್ಲಿ 102ನೇ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ ಆ.31 ರಂದು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಾಹಿತಿ, ಜನಪದ ವಿದ್ವಾಂಸ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಗಳು ಬೆಳೆಯಲು ಮೈಗೂಡಿಸಿ ಕೊಳ್ಳಬೇಕಾದ ಕೆಲವು ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ಎಳವೆಯಿಂದಲೇ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು’ ಎಂದರು. ಇನ್ನೋರ್ವ ಮುಖ್ಯ ಅತಿಥಿ ಅತ್ತಾವರ ಮಧುಸೂದನ ಕುಶೆ ಶಾಲೆಯ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಮಾತನಾಡಿ ‘ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿ ನಡೆದಾಗ ಮಕ್ಕಳು ಸಾಹಿತ್ಯದ ಸಾರ ತಿಳಿಯಲು ಸಾಧ್ಯವಾಗುತ್ತದೆ’ ಎಂದರು. ನಂತರ ಸಂಪನ್ಮೂಲ ವ್ಯಕ್ತಿ ಕೆನರಾ ಕಾಲೇಜಿನ ಉಪನ್ಯಾಸಕರಾದ ಶೈಲಜಾ ಪುದುಕೋಳಿ ಮಾತನಾಡಿ ಮಕ್ಕಳು ಕಥೆಗಳನ್ನು ಓದುವ ಮತ್ತು ಬರೆಯುವ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಸಾಹಿತಿ ರವೀಂದ್ರ ಸಣ್ಣಕ್ಕಿಬೈಲು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಹಾವೀರ್ ಜೈನ್ ಉಪಸ್ಥಿತರಿದ್ದರು. ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಇದರ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಸುರತ್ಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಗುಣವತಿ ರಮೇಶ್ ವಂದಿಸಿದರು. ಅಕ್ಷತಾ ನಿರೂಪಿಸಿದರು. ಶಿಕ್ಷಕಿಯರಾದ ಮಂಗಳ ಮತ್ತು ಮಂಜುಳಾ ಸಹಕರಿಸಿದರು.

RELATED ARTICLES
- Advertisment -
Google search engine

Most Popular