ಕಡಂದಲೆ ವಿದ್ಯಾಗಿರಿ ಅಂಗನವಾಡಿ ಕೇಂದ್ರದಲ್ಲಿ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ಚಾಲನೆ

0
32

ಮೂಡುಬಿದಿರೆ: ಕಡಂದಲೆ ವಿದ್ಯಾಗಿರಿ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಮಹತ್ವದ ಯೋಜನೆಯಂತೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಶುಕ್ರವಾರದಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು.

ಕೆ.ಎಂ.ಎಫ್. ನಿರ್ದೇಶಕರಾದ ಕೆ.ಪಿ. ಸುಚರಿತ ಶೆಟ್ಟಿ ಅವರು ನೂತನ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. “ಕಳೆದ 30 ವರ್ಷಗಳಿಂದ ಕಡಂದಲೆ ವಿದ್ಯಾಗಿರಿ ಅಂಗನವಾಡಿ ಕೇಂದ್ರ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಯೋಜನೆಯಂತೆ ಇಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಪ್ರಾರಂಭಿಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯ ಜ್ಞಾನ ಅತ್ಯವಶ್ಯಕವಾಗಿದ್ದು, ಅದಕ್ಕೆ ಪೂರಕವಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ, ಮಕ್ಕಳು ಕನ್ನಡ ಭಾಷೆಯಲ್ಲೂ ಉತ್ತಮ ಸಾಧನೆ ಮಾಡಬೇಕು,” ಎಂದು ಅವರು ಆಶಿಸಿದರು.

ವಿದ್ಯಾಗಿರಿ ಕಡಂದಲೆ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಪೂಜಾರಿ, ಪತ್ರಕರ್ತ ಜಗದೀಶ್ ಸಾಲ್ಯಾನ್, ಆರೋಗ್ಯ ಇಲಾಖೆಯ ಪಿಎಚ್‌ಸಿಒ ಶ್ವೇತಾ ಆರ್., ಆಶಾ ಕಾರ್ಯಕರ್ತೆ ಪವಿತ್ರ ನಾಯ್ಕ, ಗ್ರಾ.ಪಂ. ಸದಸ್ಯ ಜಗದೀಶ್ ಕೋಟ್ಯಾನ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜ್ಯೋತಿ ಸೀತಾರಾಮ್, ಅಂಗನವಾಡಿ ಕಾರ್ಯಕರ್ತೆ ಬೆನಡಿಕ್ಟ ದಾಂತೀಶ್, ಅಂಗನವಾಡಿ ಸಹಾಯಕಿಯರಾದ ಮೋಹಿನಿ, ವಿಲ್ಫ್ರೆಡ್ ದಾಂತೀಶ್, ಮ್ಯಾಕ್ಷಿನ್ ರೀನಾ ಲೋಬೊ, ಪ್ರಮೋದ್ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ, ಸ್ತ್ರೀ ಶಕ್ತಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

ಸಭೆಯನ್ನು ಜಾನಕಿ ವಸಂತ್ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here