Sunday, July 14, 2024
Homeರಾಜಕೀಯಲೋಕಸಭಾ ಸಾರ್ವತ್ರಿಕ ಚುನಾವಣೆ-2024: ಮಸ್ಟರಿಂಗ್ ಸ್ಥಳಗಳ ಸಂಬಂಧಿತ ವಿವರಗಳು ಮತ್ತು ಸಂಪರ್ಕ ಮಾಹಿತಿ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024: ಮಸ್ಟರಿಂಗ್ ಸ್ಥಳಗಳ ಸಂಬಂಧಿತ ವಿವರಗಳು ಮತ್ತು ಸಂಪರ್ಕ ಮಾಹಿತಿ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ಈಗಾಗಲೇ ನೇಮಕ ಮಾಡಿರುವ PRO, APRO, PO ಗಳು ಎಪ್ರಿಲ್ 25 ರಂದು ಮಸ್ಟರಿಂಗ್ ಕೇಂದ್ರವಾದ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಕುಂದಾಪುರದ ಭಂಡಾರ್ಕರ್ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬದಿಸಿದಂತೆ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಸ್ಕೂಲ್, ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಳಿಯಾರಗೋಳಿ ದಂಡ ತೀರ್ಥ ಪಿಯು ಕಾಲೇಜು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಕಳ ಎಂ.ಪಿ.ಎಂ. ಪ್ರಥಮ ದಜೆ೯ ಕಾಲೇಜು, ಕಾಬೆಟ್ಟು ಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.

ಮತಗಟ್ಟೆಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂಧಿಗಳಿಗೆ ತಾವು ಕೆಲಸ ನಿರ್ವಹಿಸಬೇಕಾದ ಮಸ್ಟರಿಂಗ್ ಕೇಂದ್ರಕ್ಕೆ ಹೋಗಲು ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿರುತ್ತದೆ.
118-ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಂದೂರು ತಾಲೂಕು ಆಡಳಿತ ಸೌಧದಿಂದ ಬಸ್ ಗಳು ಹೋರಾಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಕಾಂತರಾಜು, ಗ್ರಾಮ ಆಡಳಿತ ಅಧಿಕಾರಿ, ಬೈಂದೂರು: ಮೊ: 9482036207, ಸಹಾಯಕರಾದ ಕಿರಣ್ ಎಂ.ಜಿ. ಮೊ: 8431059053, ಪುನೀತ್ ಎಸ್. ಮೊ: 9036681599, ಗಣೇಶ ಮೇಸ್ತ ಮೊ: 8095782859 ಹಾಗೂ ವಿರೇಶ್ ಮೊ: 9743816440 ಅನ್ನು ಸಂಪರ್ಕಿಸಬಹುದಾಗಿದೆ.
119-ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಂದಾಪುರದ ಗಾಂಧಿ ಮೈದಾನದಿಂದ ಬಸ್ಸ್ ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕರಾದ ಎಂ.ಹೆಚ್. ವಾಲೇಕರ್, ತ ಮೊ: 9341049161, ಸಹಾಯಕರಾದ ರಂಗರಾಜು ಮೊ: 8197809032 ಹಾಗೂ ಕಿಶೋರ ಮೊ. 7483054340 ಅನ್ನು ಸಂಪರ್ಕಿಸಬಹುದಾಗಿದೆ.
120- ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಬೋರ್ಡ್ ಹೈ ಸ್ಕೂಲ್ ನಿಂದ ಬಸ್ ಗಳು ಹೋರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಅಶ್ವತ್ಥ್ ಮೊಬೈಲ್ ನಂ.9164146545, ಸಹಾಯಕರಾದ ಶಿವರಾಜ ಕಟಗಿ, ಮೊ. ನಂ. :9844218717, ಜಗಧೀಶ್ ಮುರನಾಳ ಮೊ.ನಂ. 9880913596 ಅನ್ನು ಸಂಪರ್ಕಿಸಬಹುದಾಗಿದೆ.
121- ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಪು ಸರ್ವೀಸ್ ಬಸ್ ನಿಲ್ದಾಣದಿಂದ ಬಸ್ ಗಳು ಹೋರಡ ಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಇಜ್ಞಾರ್ ಸಾಹೇಬ್ ಮೊ:9972716555 ಹಾಗೂ ಸಹಾಯಕರಾದ ವಿಜಯ ಮೊ. ನಂ. 9845162068 ಹಾಗೂ ಕ್ಲಾರೆನ್ಸ್ ಲೆಸ್ಟಾನ್ ಮೊ: 8095 101024 ಅನ್ನು ಸಂಪರ್ಕಿಸಬಹುದಾಗಿದೆ.
122- ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡಿಮಠ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕ ರಿಯಾಜ್ ಮಹಮ್ಮದ್ ಮೊ: 8197028656, ಸಹಾಯಕ ರಾದ ರವಿಚಂದ್ರ ಪಾಟೀಲ್ ಮೊ.ನಂಬರ್. 8277404724 ಹಾಗೂ ಬಾಲಕೃಷ್ಣ ತಲ್ಲೂರು ಮೊ: 8073752849 ಅನ್ನು ಸಂಪರ್ಕಿಸಬಹುದಾಗಿದೆ.
ಮೇಲ್ಕಾಣಿಸಿದ ಸ್ಥಳಗಳಿಂದ ನೇಮಿಸಲಾದ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಸ್ಥಳಗಳಿಗೆ ಹೊರಡಲು ಏಪ್ರಿಲ್ 25 ರಂದು ಬೆಳಗ್ಗೆ 6.30 ಗಂಟೆಗೆ ಸದ್ರಿ ಸ್ಥಳಗಳಲ್ಲಿ ಹಾಜರಿದ್ದು, ಅಲ್ಲಿಂದ ತಮ್ಮ ಮಸ್ಟರಿಂಗ್ ಸ್ವಳಗಳಿಗೆ ತೆರಳುವಂತೆ ಹಾಗೂ ದಿ: 26-04-2024 ರಂದು ಮತದಾನ ಮುಗಿದ ನಂತರ ಡಿಮಸ್ಟರಿಂಗ್‌ ಕೇಂದ್ರದಿಂದ ವಾಪಾಸ್ಸು ಸದ್ರಿ ವಾಹನದಲ್ಲೇ ವಾಪಾಸು ಕೇಂದ್ರಸ್ಥಾನಕ್ಕೆ ಬರುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ . ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular