ಬಂಟ್ವಾಳ: ತುಳುನಾಡಿನ ಕೃಷಿ ಪರಂಪರೆ ಮತ್ತು ಜೀವನ ಪದ್ಧತಿ ಬಿಂಬಿಸುವಲ್ಲಿ ಆಟಿದ ಕೂಟ ಕಾರ್ಯಕ್ರಮ ಯುವಜನತೆಗೆ ಪ್ರೇರಣಾದಾಯಕವಾಗಿದೆ ಎಂದು ರೋಟರಿ ವಲಯ ಸೇನಾನಿ ಗಣೇಶ ಶೆಟ್ಟಿ ಆರಂಬೋಡಿ ಹೇಳಿದ್ದಾರೆ.
ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ನಡೆದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಶುಭ ಹಾರೈಸಿದರು. ಇದೇ ವೇಳೆ ಸಾಧಕ ವಿದ್ಯಾರ್ಥಿನಿ ಸಾನಿಧ್ಯ ಇವರನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿ ಹೆರಾಲ್ಡ್ ಮೊಂತೆರೋ, ಪ್ರಮುಖರಾದ ಎಂ.ಪದ್ಮರಾಜ ಬಲ್ಲಾಳ್, ರಾಘವೇಂದ್ರ ಭಟ್, ಕೆ. ರಮೇಶ ನಾಯಕ್ ರಾಯಿ, ಆಂಟನಿ ಸಿಕ್ವೇರ ಮತ್ತಿತರರು ಇದ್ದರು.
ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ ವಂದಿಸಿದರು.