ಬಂಟ್ವಾಳ: ಅಂತರ್ ರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಪಬ್ಲಿಕ್ ಇಮೇಜ್ ಸಂಚಾಲಕರಾಗಿ ಆಯ್ಕೆಗೊಂಡ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಮತ್ತು ಸಹಾಯಕ ರೋಟರಿ ಫೌಂಡೇಶನ್ ಸಂಚಾಲಕ ಕೃಷ್ಣ ಶೆಟ್ಟಿ ಹಾಗೂ ಪಬ್ಲಿಕ್ ಇಮೇಜ್ ಸಂಚಾಲಕ ಅಭಿನಂದನ್ ಶೆಟ್ಟಿ ಇವರನ್ನು ಲೊರೆಟ್ಟೋಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ಸನ್ಮಾನಿಸಿ ಅಭಿನಂದಿಸಲಾಯಿತು.
ರೋಟರಿ ಫೌಂಡೇಶನ್ ಗೆ ನೀಡುವ ದೇಣಿಗೆಯಿಂದ ಸಾಮಾಜಿಕ ಸೇವೆಗೆ ಬಲ ತುಂಬುವುದರ ಜೊತೆಗೆ ರೋಟರಿ ಸಂಸ್ಥೆಗಳ ಗೌರವ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಹೇಳಿದರು. ಬಂಟ್ವಾಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಬೇಬಿ ಕುಂದರ್, ಮೊಡಂಕಾಪು ಕ್ಲಬ್ಬಿನ ಮಾಜಿ ಅಧ್ಯಕ್ಷ ಎಲಿಯಾಸ್ ಸ್ಯಾಂಕ್ಟಿಸ್, ಮಡಂತ್ಯಾರು ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಮೋನಪ್ಪ ಪೂಜಾರಿ, ಬಿ.ಸಿ.ರೋಡು ಸಿಟಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಸತೀಶ ಕುಮಾರ್, ಸಿದ್ಧಕಟ್ಟೆ ಕ್ಲಬ್ಬಿನ ಅಧ್ಯಕ್ಷ ಶಿವಯ್ಯ, ಬಿ.ಸಿ.ರೋಡು ಟೌನ್ ಕ್ಲಬ್ಬಿನ ಅಧ್ಯಕ್ಷ ಕಿಶೋರ್ ಕುಮಾರ್, ಫರಂಗಿಪೇಟೆ ಕ್ಲಬ್ಬಿನ ಅಧ್ಯಕ್ಷ ಅರ್ಜುನ್ ಪೂಂಜ, ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷೆ ಶ್ರುತಿ ಅರುಣ್ ಮಾಡ್ತಾ ಶುಭ ಹಾರೈಸಿದರು. ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶರು ರಾಜೇಶ್ ಶೆಟ್ಟಿ ವಂದಿಸಿದರು. ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ವಂದಿಸಿದರು. , ಮಾಜಿ ಉಪಾಧ್ಯಕ್ಷ ವಿಜಯ ಫೆನರ್ಡಿಸ್, ಮಾಜಿ ಕಾರ್ಯದರ್ಶರು ಕೆ.ರಮೇಶ ನಾಯಕ್ ರಾಯಿ ಕಾರ್ಯಕ್ರಮ ನಿರೂಪಿಸಿದರು.