ಉತ್ತರ ಪ್ರದೇಶ: ಈ ಹಿಂದೆ ಸೀಮಾ ಹೈದರ್ ಸೇರಿದಂತೆ ಇನ್ನಿತರರು ಬೇರೆ ದೇಶದಿಂದ ಬಂದು ಪ್ರೀತಿಸಿದ ಯುವಕನನ್ನು ಸೇರಿದ ಸುದ್ದಿಯ ಬೆನ್ನಲ್ಲೇ ಅಮೆರಿಕದ ಮಹಿಳೆಯೋರ್ವಳು ಪಬ್ ಜೀ ಆಡುತ್ತಾ, ಪ್ರೀತಿಯಲ್ಲಿ ಬಿದ್ದಿದ್ದು, ತನ್ನ ಪ್ರಿಯಕರನ್ನು ಹುಡುಕುತ್ತಾ, ಆತನ ಊರಿಗೆ ಬಂದಿದ್ದಾರೆ.
ಮಹಿಳೆಗೆ ಪಬ್ ಜೀಯಲ್ಲಿ ಉತ್ತರ ಪ್ರದೇಶ ಮೂಲದ ಯುವಕನೋರ್ವನ ಪರಿಚಯವಾಗಿದೆ. ಈ ಪರಿಚಯ ಗಾಢವಾಗುತ್ತಾ ಹೋಗಿದೆ. ಇಬ್ಬರು ಕೂಡ ಪರಸ್ಪರ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿದ್ದಾರೆ.
ಈ ನಡುವೆ ಪ್ರಿಯಕರನನ್ನು ಭೇಟಿಯಾಗಲೇ ಬೇಕು ಎಂದು ನಿರ್ಧರಿಸಿದ ಮಹಿಳೆ ಅಮೆರಿಕದಿಂದ ನೇರವಾಗಿ ಉತ್ತರಪ್ರದೇಶದ ಬಂದಿಳಿದಿದ್ದಾರೆ. ನಂತರ ಇಬ್ಬರು ಕೂಡ ಪ್ಲಾನ್ ಮಾಡಿ ದೆಹಲಿಗೆ ಹೋಗಲು ಮುಂದಾಗಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ಯಲಾಗಿದೆ ಎಂಬ ಅನುಮಾನದ ಮೇಲೆ ಪೊಲೀಸರಿಗೆ ದೂರು ನೀಡಿದರು. ಮಾಹಿತಿಯ ಮೇಲೆ ಇಬ್ಬರನ್ನು ವಿಚಾರಣೆ ನಡೆಸಲಾಗಿದೆ.
ಈ ವೇಳೆ ಇಬ್ಬರಿಗೂ ಪರಸ್ಪರ ಒಪ್ಪಿಗೆಯಿಂದ ಹೋಗುತ್ತಿದ್ದಾರೆ, ಯಾರು ಬಲವಂತ ಮಾಡಿಲ್ಲ ಎಂದು ತಿಳಿದ ಬಳಿಕ ಪೊಲೀಸರು ಅವರನ್ನು ತೆರಳಲು ಬಿಟ್ಟರು.