ಮೂಡುಬಿದಿರೆ: ಇಲ್ಲಿನ ಯುವತಿಯೊಬ್ಬಳ ಮೇಲೆ ಮುಸ್ಲಿಂ ಯುವಕನೊಬ್ಬ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದೆ. ಬಟ್ಟೆ ಹೊಲಿಸಲೆಂದು ಟೈಲರ್ ಅಂಗಡಿಗೆ ತೆರಳಿದ್ದ ವೇಳೆ ಯುವತಿಯನ್ನು ಆಕೆಯ ಏಳನೇ ತರಗತಿ ಸಹಪಾಠಿ, ಕೋಟೆಬಾಗಿಲು ನಿವಾಸಿ ಆರ್ಷಿದ್ ಎಂಬಾತ ಆ. 29ರಂದು ಅಡ್ಡಗಟ್ಟಿ ನೀನು ನನ್ನನ್ನು ಪ್ರೀತಿಸ ಬೇಕು ಎಂದು ಮೈ ಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಈತ ಹಲವು ಬಾರಿ ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದು, ತಾನು ಅದಕ್ಕೆ ನಿರಾಕರಿಸಿದುದರಿಂದ ಈ ಕೃತ್ಯ ಎಸಗಿದ್ದಾನೆ ಎಂದು ಯುವತಿ ದೂರಿದ್ದಾಳೆ. ಈ ಬಗ್ಗೆ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ಇರುವೈಲಿನವನಾದ ಆರ್ಷಿದ್, ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಬಳಿ ಇದ್ದು, ಈಗ ಕೋಟೆ ಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಲವ್ ಜಿಹಾದ್ ಯತ್ನದ ಪ್ರಕರಣ ಎಂದು ಅಭಿಪ್ರಾಯ ಪಡಲಾಗುತ್ತಿದೆ.
ಮೂಡುಬಿದಿರೆಯಲ್ಲೊಂದು ಲವ್ ಜಿಹಾದ್ ಯತ್ನ ಪ್ರಕರಣ | ಪ್ರೀತಿ ನಿರಾಕರಿಸಿದ ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಮುಸ್ಲಿಂ ಯುವಕ
RELATED ARTICLES