Sunday, July 14, 2024
HomeUncategorizedಮದುವೆಯಾಗಿದ್ದರೂ ಕಾಲೇಜು ವಿದ್ಯಾರ್ಥಿನಿ ಜೊತೆ ಲವ್!‌ : ವಿಡಿಯೋ ಮಾಡಿ ಪ್ರೇಮಿಗಳು ಆತ್ಮಹತ್ಯೆ

ಮದುವೆಯಾಗಿದ್ದರೂ ಕಾಲೇಜು ವಿದ್ಯಾರ್ಥಿನಿ ಜೊತೆ ಲವ್!‌ : ವಿಡಿಯೋ ಮಾಡಿ ಪ್ರೇಮಿಗಳು ಆತ್ಮಹತ್ಯೆ

ಬೆಂಗಳೂರು: ವಿವಾಹಿತ ಯುವಕ ಹಾಗೂ ಆತನ ಪ್ರಿಯತಮೆ ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವನ್ನಪ್ಪಿದವರನ್ನು ಅಂಜನಾ (20) ಮತ್ತು ಶ್ರೀಕಾಂತ್‌ (25) ಎಂದು ಗುರುತಿಸಲಾಗಿದೆ.
ಶ್ರೀಕಾಂತ್‌ ಈಗಾಗಲೇ ಬೇರೆ ಮದುವೆಯಾಗಿದ್ದ. ಆದರೂ ಕಾಲೇಜು ವಿದ್ಯಾರ್ಥಿನಿ ಅಂಜನಾಳನ್ನು ಆತ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಮದುವೆಯಾಗಲು ಸಾಧ್ಯವಿಲ್ಲವೆಂದರಿತು ಒಟ್ಟಿಗೆ ಸಾಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಶ್ರೀಕಾಂತ್‌ ಮೃತದೇಹ ಕೆರೆಯಲ್ಲಿ ಕಾಣಿಸಿದೆ, ಬಳಿಕ ಅಂಜನಾ ಮೃತದೇಹವನ್ನೂ ಪತ್ತೆ ಹಚ್ಚಲಾಗಿದೆ. ಆರಂಭದಲ್ಲಿ ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೆ ಗೊತ್ತಿರುವುದಿಲ್ಲ. ಆ ಬಳಿಕ ತನಿಖೆಯ ವೇಳೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.


ತಮ್ಮ ಸಾವಿಗೆ ತಾವೇ ಕಾರಣ ಎಂದು ವಿಡಿಯೋ ಮಾಡಿ ಇಬ್ಬರೂ ಕೆರೆಗೆ ಹಾರಿದ್ದರು. ಪೊಲೀಸರು ಅಂಜನಾಳ ಮೊಬೈಲ್‌ ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular