Wednesday, February 19, 2025
Homeರಾಜ್ಯಪ್ರೇಯಸಿ ಸಿಟ್ಟಿಗೆ ಬಲಿಯಾಯ್ತು ಪ್ರಿಯಕರನ ಪ್ರಾಣ..!

ಪ್ರೇಯಸಿ ಸಿಟ್ಟಿಗೆ ಬಲಿಯಾಯ್ತು ಪ್ರಿಯಕರನ ಪ್ರಾಣ..!


ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಪುರ ಗ್ರಾಮದಲ್ಲಿ ಜರುಗಿದೆ.
ಅಜಯ್ ಹಾಗೂ ಪ್ರೇಯಸಿ ಅನುಪಮ ಜೊತೆಗೆ ಬೀಳಗಿ ತಾಲ್ಲೂಕಿನ ನಿಂಗಾಪುರದ ಸ್ನೇಹಿತ ನವೀನ್ ಮನೆಗೆ ಹೋಗಿದ್ದಾರೆ.

ಆದ್ರೆ, ಮನೆಯಲ್ಲಿ ಪ್ರೇಯಸಿ ಮುಂದೆನೇ ಪ್ರಿಯಕರ ತನ್ನ ಗೆಳೆಯನೊಂದಿಗೆ ಸೇರಿಕೊಂಡು ಮದ್ಯ ಸೇವನೆ ಮಾಡಲು ಶುರು ಮಾಡಿದ್ದಾನೆ. ಇದಕ್ಕೆ ಸಿಟ್ಟಾದ ಅನುಪಮ ಅಲ್ಲಿಂದ ಹೋಗಲು ಎದ್ದಿದ್ದಾಳೆ. ಆಗ ಅಜಯ್ ಸ್ನೇಹಿತ ನವೀನ್ ಮುಧೋಳಕ್ಕೆ ಬಿಟ್ಟು ಬರುತ್ತೇನೆಂದು ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದ.

ಆಗ ಅಜಯ್​ ಅನುಪಮಗೆ ವಿಡಿಯೊ ಕಾಲ್ ಮಾಡಿ ವಾಪಸ್ ಬರದಿದ್ದರೆ ನೇಣು ಹಾಕಿಕೊಂಡು ಸಾಯುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಅನುಪಮ ಹಾಗೂ ನವೀನ್​ ಕೂಡಲೇ ವಾಪಸ್ ಬರುವಷ್ಟರಲ್ಲಿ ಅಜಯ್​ ನೇಣು ಹಾಕಿಕೊಂಡಿದ್ದಾನೆ.

ಇನ್ನು ನೇಣು ಹಾಕಿಕೊಳ್ತೇನೆ ಎನ್ನುತ್ತಲೇ ನವೀನ್ ಹಾಗೂ ಅನು ತಕ್ಷಣ ವಾಪಸ್ ಬಂದಿದ್ದರು‌. ಅಷ್ಟರಾಗಲೇ ಅಜಯ್​ ಕುಣಿಕೆಯಲ್ಲಿ ನೇತಾಡುತ್ತಿದ್ದ. ಸ್ವಲ್ಪ ಉಸಿರಾಟ ಸಹ ಇತ್ತು. ತಕ್ಷಣವೇ ಬೈಕ್ ಮೇಲೆ‌ ಕೂರಿಸಿಕೊಂಡು ಅರಕೇರಿ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾನೆ.

RELATED ARTICLES
- Advertisment -
Google search engine

Most Popular