Wednesday, January 15, 2025
Homeಉತ್ತರ ಪ್ರದೇಶಲಕ್ನೋ: 6 ಮಕ್ಕಳ ತಾಯಿ ಭಿಕ್ಷುಕನೊಂದಿಗೆ ಪರಾರಿ

ಲಕ್ನೋ: 6 ಮಕ್ಕಳ ತಾಯಿ ಭಿಕ್ಷುಕನೊಂದಿಗೆ ಪರಾರಿ

ಲಕ್ನೋ: 6 ಮಕ್ಕಳ ತಾಯಿಯೊಬ್ಬಳು ಭಿಕ್ಷುಕನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ರಾಜೇಶ್ವರಿ (36) ಎಂಬಾಕೆ ಗಂಡ ಮತ್ತು 6 ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ.

ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು.

ಪತ್ನಿ ಕಾಣಿಸದೆ ಆತಂಕಗೊಂಡ ಪತಿ ರಾಜು ಪೊಲೀಸ್ ಮೊರೆ ಹೋಗಿದ್ದು, ತನ್ನ ಪತ್ನಿಯನ್ನು ಯಾರೋ ಅಪಹರಿಸಿದ್ದಾರೆ ಎಂದು ರಾಜು ದೂರು ನೀಡಿದ್ದರು. ಪತಿಯ ದೂರು ಆಧರಿಸಿ ತನಿಖೆ ಮುಂದುವರಿಸಿದ ಪೊಲೀಸರ ಎದುರು ಸತ್ಯ ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular