Sunday, January 19, 2025
HomeUncategorizedಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನ: ಗಾಂಜಾ ಸೇವನೆ, ಇಸ್ಪೀಟ್ ಆಟ,...

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನ: ಗಾಂಜಾ ಸೇವನೆ, ಇಸ್ಪೀಟ್ ಆಟ, ಮೊಬೈಲ್ ಬಳಕೆ,

ಬೆಳಗಾವಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎಣ್ಣೆ ಪಾರ್ಟಿ ವಿಡಿಯೋ ವೈರಲ್ ಪ್ರಕರಣದ ಬೆನ್ನಲ್ಲೇ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನ ಕರಾಳ ಮುಖ ಅನಾವರಣಗೊಂಡಿದೆ. ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹೊತ್ತಿನಲ್ಲೇ ಹಿಂಡಲಗಾ ಜೈಲಿನ ಕರ್ಮಕಾಂಡ ಬಯಲಾಗಿದೆ.

ಹಿಂಡಲಗಾ ಜೈಲಿನಲ್ಲಿ ಕೈದಿಗಳು ಬಿಂದಾಸ್​ ಆಗಿ ಮೊಬೈಲ್​ ಬಳಸುತ್ತಿರುವುದು, ಗಾಂಜಾ ಸೇವಿಸುತ್ತಿರುವುದು, ಸಿಗರೇಟ್ ಸೇದುವುದು ಬೆಳಕಿಗೆ ಬಂದಿದೆ. ಜೈಲಿಗೆ ಬಿಯರ್ ಸೇರಿದಂತೆ ಎಲ್ಲವೂ ಹೊರಗಿನಿಂದ ಪೂರೈಕೆಯಾಗುತ್ತಿರುವುದು ಬಹಿರಂಗಗೊಂಡಿದೆ.

ಜೈಲಿನ ಸರ್ಕಲ್ ನಂಬರ್ 2ರ ಎರಡನೇ ಬ್ಯಾರಕ್​ನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ರಾಜಾರೋಷವಾಗಿ ಹಣವಿಟ್ಟು ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಹಣ ಕೊಟ್ಟರೆ ಕೈದಿಗಳಿಗೆ 20 ಸಾವಿರ ರೂ. ಬೆಲೆಯ ಆಂಡ್ರಾಯ್ಡ್ ಮೊಬೈಲ್ ಕೂಡ ಸಿಗುತ್ತದಂತೆ! ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದಲೇ ಐಷಾರಾಮಿ ಜೀವನ ಅನಾವರಣಗೊಂಡಿದೆ. ಹಣ ಕೊಟ್ಟರೆ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂಬ ಆರೋಪ ಕೇಳಿಬಂದಿದೆ.

ನೆಲಮಂಗಲ ಮೂಲದ ಮುಬಾರಕ್​ ಎಂಬ ಕೈದಿ ಇಸ್ಪೀಟ್ ಆಡುವ ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ. ಮೊಬೈಲ್ ಇಟ್ಟುಕೊಂಡು ಇಸ್ಪೀಟ್ ಆಡುತ್ತಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. ಬೆಳಗಾವಿಯ ಕೈದಿ ಸುರೇಶ್, ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಹಲವರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular