ದಾವಣಗೆರೆ : ಆಂಧ್ರಪ್ರದೇಶದ ಹೈದರಾಬಾದ್‌ನ ಲಾಲ್‌ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಏಪ್ರಿಲ್ 8 ರಿಂದ 12 ರವರೆಗೆ 5 ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಪುರುಷರ ಹಾಗೂ ಮಹಿಳೆಯರ ನ್ಯಾಷನಲ್ ಸೀನಿಯರ್ ಕ್ಲಾಸಿಕ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್-2024ಸ್ಪರ್ಧೆಗೆ ತೀರ್ಪುಗಾರರಾಗಿ ದಾವಣಗೆರೆ
ಜಿಲ್ಲೆಯ ಗಂಗನರಸಿ ಗ್ರಾಮದ ದಾವಣಗೆರೆ ವಾಸಿ ಎಂ.ಮಹೇಶ್ವರಯ್ಯ ಇವರು ಆಯ್ಕೆಯಾಗಿದ್ದಾರೆ. ಅಂತರಾಷ್ಟ್ರಿಯ ಕ್ರೀಡಾಪಟು, ಪವರ್‌ಲಿಪ್ಟಿಂಗ್‌ನ ಜೀವಮಾನ ಪ್ರಶಸ್ತಿ ಪುರಸ್ಕೃತರು, ಸ್ಟ್ರಾಂಗ್ ಮ್ಯಾನ್ ಆನ್ ಏಷ್ಯಾ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರಿಯ ಕೆಟಗರಿ ನಂ.1 ತೀರ್ಪುಗಾರರಾದ ಎಂ.ಮಹೇಶ್ವರಯ್ಯನವರಿಗೆ ಶ್ರೀ ಬೀರಲಿಂಗೇಶ್ವರ ವ್ಯಾಯಾಮ ಶಾಲೆ, ಗ್ರೂಫ್ ಅಫ್ ಐರನ್ ಗೇಮ್ಸ್, ನಗರಸಭೆ ವ್ಯಾಯಾಮ ಶಾಲೆಯ ಎಲ್ಲಾ ಹಿರಿಯ-ಕಿರಿಯ ಕ್ರೀಡಾ ಪಟುಗಳು, ಅಧಿಕಾರಿ ವರ್ಗದವರು ಎಲ್ಲಾ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.