Sunday, July 21, 2024
Homeಧಾರ್ಮಿಕಮಾ. 25-26: ಶಿರ್ವ ನ್ಯಾರ್ಮ ಶ್ರೀ ಧರ್ಮಜಾರಂದಾಯ ನೇಮ

ಮಾ. 25-26: ಶಿರ್ವ ನ್ಯಾರ್ಮ ಶ್ರೀ ಧರ್ಮಜಾರಂದಾಯ ನೇಮ

ಶಿರ್ವ: ಶಿರ್ವ ಗ್ರಾಮದ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಸಂಬಂಧಪಟ್ಟ ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಸುಗ್ಗಿ ಹುಣ್ಣಿಮೆಯಂಗವಾಗಿ ಮಾ.25ರಂದು ಶಿರ್ವ ನಡಿಬೆಟ್ಟಿನ ನೇಮ ಮತ್ತು ಮಾ. 26ರಂದು ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಊರಿನ ನೇಮ ನಡೆಯಲಿದೆ.

ಧಾರ್ಮಿಕ ಹಿನ್ನೆಲೆ: 550 ವರ್ಷಗಳ ಇತಿಹಾಸವಿರುವ ಸಾನ್ನಿಧ್ಯ ಇದಾಗಿದೆ. ಸಂಪ್ರದಾಯದಂತೆ ಸುಗ್ಗಿ ಹುಣ್ಣಿಮೆಯಂದು ಶಿರ್ವ ನಡಿಬೆಟ್ಟಿನ ಕಾಲಾವಧಿ ನೇಮ ನಡೆಯುತ್ತದೆ. ಅಂದು ನಡಿಬೆಟ್ಟು ಚಾವಡಿಯಿಂದ ದೈವದ ವಡ್ಯಾಣವನ್ನು ಅಲಂಕಾರದೊಂದಿಗೆ ದೈವದ ಸನ್ನಿಧಿಗೆ ತರಲಾಗುತ್ತದೆ. ರಾತ್ರಿ ಶ್ರೀ ಧರ್ಮಜಾರಂದಾಯ ದೈವವು ಬಂಟನೊಂದಿಗೆ ಬಾಕ್ಯಾರು ಗದ್ದೆಯಲ್ಲಿ ಕುದುರೆಯೇರಿ ಶ್ರೀ ವಿಷ್ಣುಮೂರ್ತಿ ದೇವರ ಭೇಟಿ ಮಾಡುವ ದೃಶ್ಯ ರಮಣೀಯವಾಗಿರುತ್ತದೆ. ಅಲ್ಲಿಂದ ಹಿಂತಿರುಗುವ ವೇಳೆ ಬಾಕ್ಯಾರ್ ನಲ್ಲಿ ತಪ್ಪಂಗಾಯಿ, ತೂಟೆದಾರ ಮುಂತಾದ ಜನಪದ ಸಾಂಪ್ರದಾಯಿಕ ಪ್ರಕ್ರಿಯೆ ನಡೆದು ನಡಿಬೆಟ್ಟು ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ಭೇಟಿ ಮಾಡಿ ದೈವಸ್ಥಾನಕ್ಕೆ ಬಂದು ಭಕ್ತರಿಗೆ ಅಭಯ ವಾಕ್ಯ ನೀಡಿ ನೇಮ ಸಂಪನ್ನಗೊಳ್ಳುತ್ತದೆ. ಆನುವಂಶಿಕ ಮೊಕ್ತೇಸರ ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಕಾರ್ಯದರ್ಶಿ ನ್ಯಾರ್ಮ ಹೊಸಮನೆ ವಿ. ಸುಬ್ಬಯ್ಯ ಹೆಗ್ಡೆ ಮತ್ತು ಕೋಶಾಧಿಕಾರಿ ನ್ಯಾರ್ಮ ಕುಶ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳವಂದಿಗರು, ಆಡಳಿತ ಮಂಡಳಿ ಹಾಗೂ ಭಕ್ತರ ಸಹಕಾರದೊಂದಿಗೆ ನೇಮ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular