ಉಡುಪಿ : ಶ್ರೀ ಅನಂತೇಶ್ವರ ದೇಗುಲದಲ್ಲಿ ಮಾ. 7ರಿಂದ 14ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ನೆರವೇರಲಿದೆ. ಮಾ. 7ರ ರಾತ್ರಿ ಬಲಿ, ಅಂಕುರಾರೋಹಣ, ಮಾ. 8ರ ಮಹಾಶಿವರಾತ್ರಿಯಂದು ಧ್ವಜಾರೋಹಣ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾ ರಂಗಪೂಜೆ, ಮಾ. 9ರಿಂದ 13ರ ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ ನಡೆಯಲಿದೆ. ಮಾ. 12ರಂದು ಮಹಾಪೂಜೆ, ರಥಾರೋಹಣ ಮಹಾರಥೋತ್ಸವ, ನಡೆದು ಮಾ.13ರಂದು ಕವಾಟೋದ್ಘಾಟನೆ, ಮಹಾಮಂತ್ರಾಕ್ಷತೆ, ಮಾ. 14ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. ಪ್ರತಿದಿನ ಭಜನೆ, ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿವರಾತ್ರಿ ಪ್ರಯುಕ್ತ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿಯೂ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರರಾದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.