Wednesday, July 24, 2024
Homeಧಾರ್ಮಿಕಮಾ. 8: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ, ರಥೋತ್ಸವ

ಮಾ. 8: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ, ರಥೋತ್ಸವ

ಉಡುಪಿ : ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 8ರಂದು ಮಹಾಶಿವರಾತ್ರಿ ಹಾಗೂ ರಥೋತ್ಸವ ನಡೆಯಲಿದೆ.

ಮಾ. 6ರ ಪ್ರಾತಃ 9ರಿಂದ ಗಣಪತಿ ಪೂಜೆ, ಪಂಚಾಮೃತಾದಿ ಅಭಿಷೇಕಗಳು, 10.30ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ ಅಲಂಕಾರ ಪೂಜೆ, ರಾತ್ರಿ 7.30ಕ್ಕೆ ದೀಪಾರಾಧನೆ, ವಿಶೇಷ ಪೂಜೆಗಳು, ಮಾ. 7ರಂದು ಏಕಾದಶಿ ಪ್ರಯುಕ್ತ ನಿತ್ಯ ಪೂಜೆಗಳು, ಮಾ. 8ರ ಪ್ರಾತಃ 6.30ರಿಂದ ಪಂಚಾಮೃತಾಭಿಷೇಕ, ಏಕಾಹ ಭಜನೆ ಪ್ರಾರಂಭ (ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ, ಇತರ ಭಜನ ಮಂಡಳಿಗಳ ಸಹಕಾರದಿಂದ), 8.30ಕ್ಕೆ ಶತರುದ್ರ ಪಾರಾಯಣ, ನವಕ ಪ್ರಧಾನ ಹೋಮ, ಕಲಶಾಭಿಷೇಕ, 11 ಕ್ಕೆ ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ, 12.30ಕ್ಕೆ ರಥ ಸಂಪ್ರೋಕ್ಷಣೆ, ಸಂಜೆ 5ರಿಂದ ಶಿವರಾತ್ರಿ ಅರ್ಘ್ಯ ಪ್ರಧಾನಾದಿಗಳು, 5.30ಕ್ಕೆ ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ವಾರ್ಷಿಕ ಪೂಜೆ, ರಾತ್ರಿ 7ಕ್ಕೆ ಉತ್ಸವ ಬಲಿ, ರಥೋತ್ಸವ, ವಾಲಗ ಮಂಟಪ ಪೂಜೆ, 11ಕ್ಕೆ ಮಹಾರಂಗಪೂಜೆ, ಭೂತ ಬಲಿ, ಶ್ರೀ ನಂದಿಕೋಣ, ರಕ್ತೇಶ್ವರಿ, ಬೊಬ್ಬರ್ಯ ದೈವಗಳಿಗೆ ಪೂಜೆ, ಕ್ಷೇತ್ರಪಾಲ ಪೂಜೆ, ಮಾ. 9ರ ಪ್ರಾತಃ 8ಕ್ಕೆ ಉಷಃಕಾಲ ಪೂಜೆ, ಪಂಚಾಮೃತಾಭಿಷೇಕ, ಸಂಪೋಕ್ಷಣೆ, 9ಕ್ಕೆ ತುಲಾಭಾರ ಸೇವೆ, ಅಲಂಕಾರ ಪೂಜೆ, 10.30ಕ್ಕೆ ಮಹಾಮಂತ್ರಾಕ್ಷತೆ, 11ಕ್ಕೆ ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಮಂಗಲ ಜರಗಲಿದೆ. ಮಾ. 7ರ ಸಂಜೆ 5.30ರಿಂದ ಸಭೆ, ಸಾಂಸ್ಕೃತಿಕ ಕಾರ್ಯಕ್ರಮವಾಗಿ 6ರಿಂದ ಆದಿ ಉಡುಪಿ ಹಿ.ಪ್ರಾ.ಶಾಲೆ, ಆಂ.ಮಾ.ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ, 7.30ರಿಂದ ವಿ। ಶ್ರೀಧರ್ ರಾವ್ ಬನ್ನಂಜೆಯವರ ಶಿಷ್ಯರಿಂದ (ಜ್ಞಾನದೀಪ ಕಲಾತಂಡ) ಭರತನಾಟ್ಯ, ಮಾ. 8ರ ರಾತ್ರಿ 9ರಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular