Saturday, November 2, 2024
Homeರಾಜ್ಯಮಾ. 10ಕ್ಕೆ ಕಲಾಕುಂಚದಿಂದ “ಮತದಾನ ಜಾಗೃತಿ” ಕವಿಗೋಷ್ಠಿ ಸಮಾರಂಭದ ಉದ್ಘಾಟನೆ

ಮಾ. 10ಕ್ಕೆ ಕಲಾಕುಂಚದಿಂದ “ಮತದಾನ ಜಾಗೃತಿ” ಕವಿಗೋಷ್ಠಿ ಸಮಾರಂಭದ ಉದ್ಘಾಟನೆ

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸದ್ಯದಲ್ಲೇ ನಡೆಯಲಿರುವ ಭಾರತದ. ಲೋಕಸಭಾ ಚುನಾವಣೆಯ ಪ್ರಯುಕ್ತ ಸಾರ್ವಜನಿಕರು ಕರ್ತವ್ಯ ನಿಷ್ಠೆಯಿಂದ, ಬದ್ಧತೆಯಿಂದ ಮತ ಚಲಾಯಿಸುವ ಸದುದ್ದೇಶದಿಂದ “ಮತದಾನ ಜಾಗೃತಿ” ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನಕಾರ್ಯದರ್ಶಿ ಶೈಲಾ ವಿಜಯಕುಮಾರ್ ತಿಳಿಸಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆಯ ಹಿರಿಯ ಸಾಹಿತಿ, ಎ.ಸಿ.ಶಶಿಕಲಾ ಶಂಕರಮೂರ್ತಿಯವರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಹಿರಿಯ ಬರಹಗಾರ ಸಾಹಿತಿ, ಕವಿ ಸಾಲಿಗ್ರಾಮ ಗಣೇಶ್ ಶೆಣೈಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಹಿರಿಯ ಸಾಹಿತಿ, ಸುದ್ದಿ ಗಿಡುಗ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಮಂಜುನಾಥ್, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹಿರಿಯ ಕವಿ ಪರಮೇಶ್ವರಯ್ಯ. ವೀರಭದ್ರಯ್ಯ ಮಠದ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ. ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಹಿರಿಯ ಕವಯತ್ರಿ ಹೇಮಾ ಶಾಂತಪ್ಪ ಪೂಜಾರಿಯವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ. ಸಾಹಿತ್ಯಾಸಕ್ತ ಕವಯತ್ರಿ, ಕವಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಹತ್ವಪೂರ್ಣ ಅಪರೂಪದ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಬೇಕಾಗಿ ಕಛೇರಿ ಕಾರ್ಯದರ್ಶಿ ಎಂ.ಎಸ್.ಪ್ರಸಾದ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular