ಬೆಳ್ತಂಗಡಿ: ಮಡಂತ್ಯಾರು ಸೇಕ್ರೇಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಶಿಕ್ಷಕಿ ಸುಜಾತಾ ಕೆ. ಕಜೆಕಾರ್ ಹೃದಯಾಘಾತದಿಂದ ನಿಧನರಾದರು. 39ರ ಹರೆಯದ ಸುಜಾತಾ ಅವರು ಮೇ 1ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು.
ಕಳೆದ 12 ವರ್ಷಗಳಿಂದ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.
ಇವರು ಪತಿ ಕೇಶವ, ಮಕ್ಕಳಾದ ಪ್ರತೀಕ್, ಪ್ರವಿತ್, ಶಾಲಾ ವಿದ್ಯಾರ್ಥಿಗಳನ್ನು, ಸಹೋದ್ಯೋಗಿಗಳನ್ನು ಅಗಲಿದ್ದಾರೆ.