ಉಳ್ಳಾಲ : ಶ್ರೀ ನಾಗವನ ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಸ್ಥಾನ ಅಂಬ್ಲಮೊಗರು ನೂತನ ಧರ್ಮ ಚಾವಡಿ ಪ್ರವೇಶೋತ್ಸವ ಮತ್ತು ಪಡ್ಯಾರ ಮನೆ ಬ್ರಹ್ಮಕಲಶೋತ್ಸವ ಸಲುವಾಗಿ ಉಳ್ಳಾಲ ತಾಲೂಕು ಪಡ್ಯಾರ ಮನೆಯಲ್ಲಿ ‘ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ಮೇ 5 ರಂದು ಜರಗಿತು. ದಿ.ಕಲ್ಲಾಯಿ ವಿಠಲ ರೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಗಣೇಶ್ ಕುಮಾರ್ ಹೆಬ್ರಿ, ಹರಿಶ್ಚಂದ್ರ ನಾಯಗ ಮಾಡೂರು, ಜೀತೇಶ್ ಕೋಳ್ಯೂರು, ಸ್ಕಂದ ಕೊನ್ನಾರ್ ಹಿಮ್ಮೇಳದಲ್ಲಿದ್ದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸಂಜೀವ ಶೆಟ್ಟಿ ಬಿ.ಸಿ.ರೋಡು ಅರ್ಥಧಾರಿಗಳಾಗಿದ್ದರು. ತಾಳಮದ್ದಳೆಯನ್ನು ಸಂಯೋಜಿಸಿದ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಪಡ್ಯಾರಮನೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಡ್ಯಾರ ಮನೆ ಮಹಾಬಲ ಆಳ್ವ ಕಮ್ಮಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸುಶಾಂತ್ ಭಂಡಾರಿ ಪಡ್ಯಾರ ಮನೆ, ಸಂಚಾಲಕರಾದ ಜಯಶೀಲ ಶೆಟ್ಟಿ ಪಡ್ಯಾರ ಮನೆ ಮತ್ತು ಕಲ್ಲಾಯಿ ಲಕ್ಷ್ಮೀ ನಾರಾಯಣ ರೈ ಹರೇಕಳ, ರಾಧಾಕೃಷ್ಣ ರೈ ಕೊಟ್ಟುಂಜ ಉಪಸ್ಥಿತರಿದ್ದರು.