ಮಣಿಪಾಲ 21ಸೆ.2024 : ಸ್ಪೋರ್ಟ್ಸ್ ಕೌನ್ಸಿಲ್, ಮಾಹೆ ಮಣಿಪಾಲದ ವತಿಯಿಂದ ಶಾಲಾ ಮಕ್ಕಳಿಗೆ ಮ್ಯಾಜಿಕ್ ಕೋರ್ಸ್ ಮತ್ತು ಯೋಗ ಶಿಬಿರವನ್ನು ಮಣಿಪಾಲದಲ್ಲಿ ಆಯೋಜಿಸಲಾಗಿದೆ.
ಮ್ಯಾಜಿಕ್ ಕೋರ್ಸ್:
• ದಿನಾಂಕ 3 ರಿಂದ 5 ಅಕ್ಟೋಬರ್ 2024
• ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00
• ಸ್ಥಳ: ಮರೆನಾ,ಮಣಿಪಾಲ
ಈ ಅನನ್ಯ ಅವಕಾಶವು ಮಕ್ಕಳಿಗೆ ಮ್ಯಾಜಿಕ್ ಕಲೆಯನ್ನು ಪರಿಚಯಿಸುವುದಲ್ಲದೆ ಸೃಜನಶೀಲತೆ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ವೃತ್ತಿಪರರಾದ, ಪರಿಣಿತರಾದ ತಜ್ಞರು ಈ ಕೋರ್ಸ್ ನಿರ್ವಹಿಸುತ್ತಾರೆ. ಮಕ್ಕಳು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅವಕಾಶವಿದೆ.
ನೋಂದಾವಣೆಗೆ ಕೊನೆಯ ದಿನಾಂಕ: 26 ಸೆ. 2024
ನೋಂದಣಿ ಮತ್ತು ಶುಲ್ಕ ನೀಡಲು ಲಿಂಕ್: http://tinyurl.com/bdzmujz7
ಸಂಪರ್ಕ: 9844266082; 9986134542
ಯೋಗ ಶಿಬಿರ
• ದಿನಾಂಕ: 7 ರಿಂದ 18 ಅಕ್ಟೋಬರ್ 2024
• ಸಮಯ: ಬೆಳಿಗ್ಗೆ10.00 ರಿಂದ ಮಧ್ಯಾಹ್ನ 11.30
• ಸ್ಥಳ: ಮರೆನಾ, ಮಣಿಪಾಲ
ಯೋಗದ ಅಭ್ಯಾಸದ ಮೂಲಕ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಈ ಶಿಬಿರವನ್ನು ವಿನ್ಯಾಸಗೊಳಿಸಲಾಗಿದೆ, ಇದು ಅವರಿಗೆ ಸಮಗ್ರ ಆರೋಗ್ಯ ಕಾಯ್ದುಕೊಳ್ಳಲು ಸಹಾಯಕವಾಗಲಿದೆ.
• ನೋಂದಾವಣೆಗೆ ಕೊನೆಯ ದಿನಾಂಕ:: 6 ಅಕ್ಟೋಬರ್ 2024
• ನೋಂದಣಿ ಮತ್ತು ಶುಲ್ಕ ನೀಡಲು ಲಿಂಕ್ http://tinyurl.com/2r9yy7y6
•
ಸಂಪರ್ಕ: ಡಾ. ಲಾವಣ್ಯ ಶೆಟ್ಟಿ : 9980185999
Email: yoga.kmc@mnaipal.edu ; Lavanya.shetty@manipal.edu
ಎರಡೂ ಕಾರ್ಯಕ್ರಮಗಳು ಮರೆನಾ ಕ್ರೀಡಾ ಸಂಕೀರ್ಣ MAHE ನಲ್ಲಿ ನಡೆಯಲಿದ್ದು, ಮಕ್ಕಳಿಗೆ ಕಲಿಯಲು ಮತ್ತು ಬೆಳೆಯಲು ಸುರಕ್ಷಿತ ಮತ್ತು ಕ್ರಿಯಾತ್ಮಕ ವಾತಾವರಣವನ್ನು ಒದಗಿಸುತ್ತದೆ..