ನಾರಾವಿ ಮಹಾ ಚಂಡಿಕಾ ಯಾಗ-2024 ಡಿಸೆಂಬರ್ 22
ಧಾರ್ಮಿಕ ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿದೆ ನಾರಾವಿ ಎಂಬ ಸು-ಗ್ರಾಮ. ನಾರಾವಿಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಊರ ಪರವೂರ ಸದ್ಭಕ್ತರ , ಪೂಜ್ಯ ಸ್ವಾಮೀಜಿಗಳ ಹಾಗೂ ಧಾರ್ಮಿಕ ಕ್ಷೇತ್ರದ ಗಣ್ಯರ ಕೂಡುವಿಕೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಮಹಾ ಚಂಡಿಕಾ ಯಾಗ
ನಡೆಯಲಿದೆ.
ಭಾರತದ ಇತಿಹಾಸದ ಪುಟದಲ್ಲಿ ತನ್ನದೇ ಆದ ಧಾರ್ಮಿಕ ಮಹತ್ವ ಹೊಂದಿರುವ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಊರ ಪರವೂರ ಭಕ್ತರ ಭಕ್ತಿ ಸಮ್ಮಿಲನದ ಧ್ಯೋತಕದಲ್ಲಿ ನಡೆಯಲಿರುವ ಲೋಕಕಲ್ಯಾಣಾರ್ಥ ಮಹಾ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಶ್ರೀ ಮಹಾದೇವಿ ಜಗನ್ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ನಾರಾವಿಯ ಮಹಾ ಭಕ್ತ ಜನತೆಯು ಕಾತರದಿಂದ ಕಾಯುತ್ತಿದ್ದಾರೆ.
ಅದರ ಪೂರ್ವಭಾವಿ ಕಾರ್ಯಕ್ರಮವಾಗಿ ಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇದೇ ಬರುವ ದಿನಾಂಕ 22-09-2024 ರವಿವಾರ ಬೆಳಗ್ಗೆ 9-30 ಕ್ಕೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಊರ ಭಕ್ತ ಜನರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ನಾರಾವಿ ಮಹಾ ಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಮಸ್ತ ಹಿಂದೂ ಬಂಧು ಭಗಿನಿ ಯಾರನ್ನು ಭಕ್ತಿಪೂರ್ವಕವಾಗಿ ಆಮಂತ್ರಿಸಲಾಗಿದೆ.