ಪ್ರಯಾಗರಾಜ್: ಮೌನಿ ಅಮಾವಾಸ್ಯೆಯ ದಿನವಾದ ಜ.29ರಂದು ಬೆಳಗಿನ ಜಾವ ನಡೆದ ಕಾಲ್ತುಳಿತದಲ್ಲಿ 10ಕ್ಕೂ ಮಿಕ್ಕಿ ಭಕ್ತಾಧಿಗಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬೆಳಗ್ಗೆಯಿಂದಲೇ ರವಾನೆಯಾಗುತ್ತಿದ್ದರೂ ಅಧಿಕೃತ ಹೇಳಿಕೆ ಬಿಡುಗಡೆಗೊಂಡಿರಲಿಲ್ಲ.
ಮಹಾಕುಂಭಮೇಳದಲ್ಲಿ ಮೃತಪಟ್ಟವರ ಸಂಖ್ಯೆಯ ಬಗ್ಗೆ ಕೊನೆಗೂ ಉತ್ತರಪ್ರದೇಶ ಸರ್ಕಾರ ಡಿಐಜಿ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಇದೀಗ ಪ್ರಯಾಗರಾಜ್ ಎಸ್ಪಿ ವೈಭವ್ ಕೃಷ್ಣ ಪತ್ರಿಕಾಗೋಷ್ಠಿ ನಡೆಸಿ. “ಮೌನಿ ಅಮಾವಾಸ್ಯೆಯ ಬ್ರಹ್ಮ ಮುಹೂರ್ತದ ಮೊದಲು ರಾತ್ರಿ 1 ರಿಂದ 2 ರ ನಡುವೆ. ಅಖಾರ ಮಾರ್ಗದಲ್ಲಿ ಅಪಾರ ಜನರು ಜಮಾಯಿಸಿದರು. ಈ ಜನಸಂದಣಿಯಿಂದಾಗಿ. ಇನ್ನೊಂದು ಬದಿಯ ಬ್ಯಾರಿಕೇಡ್‌ಗಳು ಮುರಿದು ಭಕ್ತರ ಮೇಲೆ ಜನರು ಹರಿದವು. ಇದರಿಂದಾಗಿ 90 ಜನ ಗಂಭೀರ ಗಾಯಗೊಂಡಿದ್ದು. 30 ಜನರು ಮೃತಪಟ್ಟಿದ್ದಾರೆ ಎಂದಿದ್ದಾರೆ.