ದಾವಣಗೆರೆ : ದಾವಣಗೆರೆಯ ಶ್ರೀ ಕೃಷ್ಣ ಮಿತ್ರ ವೃಂದದ ಆಶ್ರಯದಲ್ಲಿ ಇತ್ತೀಚಿಗೆ ಮಹಾಶಿವರಾತ್ರಿ ಪ್ರಯುಕ್ತ ನಗರದ ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿರುವ ಶ್ರೀ ಕೃಷ್ಣ ಕಲಾಮಂದಿರದ ಭವ್ಯ ಸಭಾಂಗಣದಲ್ಲಿ ಧಾರ್ಮಿಕ ಪರಂಪರೆಯ ಮಹಾ ರುದ್ರಭಿಷೇಕ ರುದ್ರ ಪರಾಯಣ ಪೂಜಾ ಕಾರ್ಯಕ್ರಮ ಮಹಾಮಂಗಳಾರತಿಯ ಜೊತೆಗೆ ಮಹಿಳೆಯರು ಮಕ್ಕಳು ಸಾಮೂಹಿಕ ನೃತ್ಯ, ಭರತನಾಟ್ಯ, ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಿಂದ
ಮಹಾಶಿವರಾತ್ರಿ ಸುಸಂಪನ್ನಗೊಂಡಿತು. ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಎಂ.ಎಸ್. ಪ್ರಸಾದ್
ರವರ ಅಧ್ಯಕ್ಷತೆಯಲ್ಲಿ ನಡೆದ ಈ ಅಪರೂಪದ ಆಧ್ಯಾತ್ಮ ಕಾರ್ಯಕ್ರಮದಲ್ಲಿ ಮಂಡಳಿಯ ಉಪಾಧ್ಯಕ್ಷರಾದ ಮಂಜುನಾಥ ದಾಸ್. ಉಪಾಧ್ಯಕ್ಷೆ ಪೂರ್ಣಿಮಾ ಐತಾಳ್. ಪ್ರಧಾನ ಕಾರ್ಯದರ್ಶಿ ಹರೀಶ ಎಸ್, ಸಮಿತಿ ಸದಸ್ಯರಾದ ಬಾಲಕೃಷ್ಣ ವೈದ್ಯ. ಚಂದ್ರಶೇಖರ ಅಡಿಗ ಮುಂತಾದವರು ಉಪಸ್ಥಿತರಿದ್ದರು.