ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮೊದಲ ಉಪಕುಲಪತಿ, ಖ್ಯಾತ ಹೃದಯ ಶಸ್ತ್ರಜ್ಞ ಡಾ. ಎಂ.ಎಸ್. ವಲಿಯಥಾನ್ ಬುಧವಾರ ರಾತ್ರಿ ನಿಧನರಾಗಿದ್ದಾರೆ. 90 ವರ್ಷದ ವಲಿಯಥಾನ್ ಅವರು ಇಪ್ಪತ್ತು ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತಿರುವನಂತಪುರಂನಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಡಿಸ್ಪೋಸೇಬಲ್ ಬ್ಲಡ್ ಬ್ಯಾಗ್ ಮತ್ತು ಟಿಲ್ಟಿಂಗ್ ಡಿಸ್ಕ್ ಹೃದಯ ಕವಾಟದಂತಹ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ವಲಿಯಥಾನ್ ಅವರ ಕಾರ್ಯ ಭಾರತದ ವೈದ್ಯಕೀಯ ಸಾಧನಗಳ ಉದ್ಯಮಕ್ಕೆ ಅಡಿಪಾಯವನ್ನು ಹಾಕಿತ್ತು. 1993ರಲ್ಲಿ ಪ್ರೊಫೆಸರ್ ಮಾರ್ತಾಂಡ ವರ್ಮ ವಲಿಯಥಾನ್ ಮಾಹೆಯ ಮೊದಲ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸುವ ಮೂಲಕ ಮಾಹೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದರು.
ಪ್ರೊ. ವಲಿಯಥಾನ್ ತಮ್ಮ ವೃತ್ತಿ ಜೀವನದುದ್ದಕ್ಕೂ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. 2005ರಲ್ಲಿ ಪದ್ಮವಿಭೂಷಣ, 2002ರಲ್ಲಿ ಪದ್ಮಶ್ರೀ, ಡಾ. ಬಿ.ಸಿ.ರಾಯ್ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಸೇರಿದಂತೆ ಹಲವು ಮಹತ್ವದ ಪ್ರಶಸ್ತಿಗಳು ಅವರ ಪಾಲಿಗೆ ಒಲಿದುಬಂದಿದ್ದವು.
ಮಣಿಪಾಲ | ಮಾಹೆಯ ಪ್ರಥಮ ಉಪಕುಲಪತಿ, ಖ್ಯಾತ ಹೃದಯ ತಜ್ಞ ಡಾ. ಎಂ.ಎಸ್. ವಲಿಯಾಥನ್ ನಿಧನ
RELATED ARTICLES