Saturday, December 14, 2024
Homeಮಣಿಪಾಲಉಡುಪಿಯ ಮಹೇಶ್ ಮರ್ಣೆ, ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

ಉಡುಪಿಯ ಮಹೇಶ್ ಮರ್ಣೆ, ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮರ್ಣೆ ಎಂಬ ಸಣ್ಣ ಊರಿನ ಮಹೇಶ್ ಮರ್ಣೆ “ಕಲಾಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗಳ ಜೊತೆಗೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಇನ್ನು ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಹಳ್ಳಿಯ ಪ್ರತಿಭೆ.

ಸದಾ ಹೊಸತನದ ಹುಡುಕಾಟದಲ್ಲಿರುವ ಇವರು ಇದೀಗ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾವಚಿತ್ರ ವನ್ನು ಸುಮಾರು 2 ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು , ಬೂತ ಕನ್ನಡಿಯನ್ನು ಸೂರ್ಯನ ಕಿರಣದ ನೇರಕ್ಕೆ ಹಿಡಿದು, ಕನ್ನಡಿಯಿಂದ ಉತ್ಪತ್ತಿಯಾಗುವ ಶಾಖವು ಮರದ ಹಲಗೆಗೆ ಬೀಳುವಂತೆ ಮಾಡಿ, ಮರವನ್ನು ಸುಟ್ಟು ರಾಷ್ಟ್ರಪತಿಗಳ ಭಾವಚಿತ್ರದ ಕಲಾಕೃತಿಯನ್ನು ರಚಿಸಿದ್ದಾರೆ. ಕಲಾಕೃತಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸುವಾಗ ಇದನ್ನು ‘ ಸೂರ್ಯ ಚುಂಬಿಸಿದ ಕಲಾಕೃತಿ ‘ ಎಂದು ಹೆಸರು ಇಡಲಾಗಿತ್ತು. ಈಗ ಕಲಾಕೃತಿ ಯನ್ನು ರಾಷ್ಟ್ರಪತಿಗಳು ಮೆಚ್ಚಿಕೊಂಡು ತಮ್ಮ ಕಚೇರಿಯಿಂದ Email ಮೂಲಕ ಸಂದೇಶವನ್ನು ಕಳುಹಿಸಿರುವುದು ಹೆಮ್ಮೆಯ ಸಂಗತಿ, ಇವರು ಮರ್ಣೆಯ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿಗಳ ಸುಪುತ್ರರಾಗಿದ್ದಾರೆ. ಇವರ ಮೂಲಕ ಕಲಾ ಕ್ಷೇತ್ರದ ಇನ್ನಷ್ಟು ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿ.

RELATED ARTICLES
- Advertisment -
Google search engine

Most Popular