Thursday, July 25, 2024
HomeUncategorizedಉಡುಪಿ ಸರ್ಕಾರಿ ಆಸ್ಪತ್ರೆ ಮುಂದೆ ಮಹೇಶ್‌ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ: ಗೊಂದಲದ ವಾತಾವರಣ

ಉಡುಪಿ ಸರ್ಕಾರಿ ಆಸ್ಪತ್ರೆ ಮುಂದೆ ಮಹೇಶ್‌ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ: ಗೊಂದಲದ ವಾತಾವರಣ

ಉಡುಪಿ: ಬೆಳ್ತಂಗಡಿಯ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಹೋರಾಟಗಾರರಾದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ತಮ್ಮಣ್ಣ ಶೆಟ್ಟಿ ಹಾಗೂ ಅವರ ಬೆಂಬಲಿಗರು ಉಡುಪಿ ಸರ್ಕಾರಿ ಆಸ್ಪತ್ರೆ ಮುಂದೆ ಜಮಾಯಿಸಿರುವುದು ಕಂಡು ಬಂದಿದೆ. ಯಾವ ಉದ್ದೇಶದಿಂದ ಇಲ್ಲಿ ಇವರು ನೆರೆದಿದ್ದಾರೆ ಎಂದು ತಿಳಿದುಬಂದಿಲ್ಲ. ಆದರೆ ಇಂದು ಮುಂಜಾನೆಯಿಂದಲೇ ಇಲ್ಲಿ ಇವರು ನೆರೆದಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ರೂಪಿಸಿಕೊಂಡು ಬಂದಿರುವ ಮಹೇಶ್‌ ಶೆಟ್ಟಿ ಮತ್ತು ತುಳುನಾಡಿನ ಸಂಪ್ರದಾಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಾ ಪ್ರಸಿದ್ಧಿ ಪಡೆದಿರುವ ಹಾಗೂ ಸೌಜನ್ಯ ಪ್ರಕರಣದಲ್ಲೂ ಹೋರಾಟದಲ್ಲಿ ಭಾಗಿಯಾಗಿರುವ ತಮ್ಮಣ್ಣ ಶೆಟ್ಟಿ ಜೊತೆಯಾಗಿ ಇಲ್ಲಿ ಕಾಣಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

RELATED ARTICLES
- Advertisment -
Google search engine

Most Popular