ಪುತ್ತೂರು : ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಬಹರೈನ್ ಕುಲಾಲ ಸಂಘದ ಮಾಜಿ ಅಧ್ಯಕ್ಷ, ತುಳುನಾಡು ವಾರ್ತೆ ಪತ್ರಿಕೆಯ ಗೌರವ ಸಂಪಾದಕ ಗಣೇಶ್ ಮಾಣಿಲ ಇವರ ಅಕ್ಕನ ಮಗಳು ಮೈತ್ರಿ ಕೆ. ಅವರು ವಿಜ್ಞಾನ ವಿಭಾಗದಲ್ಲಿ 98.33% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೆಯ್ಯೂರು ಕೈತಡ್ಕ ಮನೆಯ ವಿಶ್ವನಾಥ ಬಿ ಕೆ ಮತ್ತು ರಜನಿ ದಂಪತಿಯ ಸುಪುತ್ರಿ.