Sunday, July 21, 2024
Homeಉಡುಪಿಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನಲ್ಲಿ 'ನೂವಾ' ಸಂಗ್ರಹ ಬಿಡುಗಡೆ

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನಲ್ಲಿ ‘ನೂವಾ’ ಸಂಗ್ರಹ ಬಿಡುಗಡೆ

ಉಡುಪಿ: ವಿಶ್ವದ ಆರನೇ ಅತಿ ದೊಡ್ಡ ರಿಟೇಲರ್ ಚಿನ್ನದ ಕಂಪನಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ ಹೊರ ತಂದಿರುವ ‘ನೂವಾ’ ವಜ್ರಾಭರಣ ಸಂಗ್ರಹವನ್ನು ಮಳಿಗೆಯಲ್ಲಿ ದೀಪ್ತಿ ಪೈ, ಐಶ್ವರ್ಯ ಜಿ. ಭಂಡಾರಿ, ಶ್ರೇಯಾ ಎಸ್ ಪೂಜಾರಿ ಅನಾವರಣಗೊಳಿಸಿದರು.13 ದೇಶಗಳಲ್ಲಿ 350 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಈ ಹೊಸ ಆಭರಣ ಸಂಗ್ರಹ ಬಿಡುಗಡೆಯೊಂದಿಗೆ ಕರೀನಾ ಕಪೂರ್ ಅವರನ್ನು ರಾಯಬಾರಿಯನ್ನಾಗಿ ನೇಮಿಸಿದೆ.ವಿನೂತನ ವಿನ್ಯಾಸದಿಂದ ಕೂಡಿರುವ ಆಭರಣಗಳ ಸಂಗ್ರಹವು ವಿಶೇಷ ವೇವ್ಸ್, ಫಾರ್ಮ್ಸ್, ಪೋಲ್ಡ್ ಮತ್ತು ಟೆಕ್ಟರ್ ಗಳನ್ನು ಒಳಗೊಂಡಿದೆ. ಇದನ್ನು ವಜ್ರಾಭರಣದ ಐಷಾರಾಮಿ ತುಣುಕುಗಳನ್ನು ಬಳಸಿ ಅತ್ಯಂತ ಜಾಣ್ಮೆ ಹಾಗೂ ನಿಖರತೆಯಿಂದ ಸಿದ್ದಪಡಿಸಲಾಗಿದೆ.

ನೂವಾ ಸಂಗ್ರಹವನ್ನು ಉತ್ಸಾಹದಿಂದ ಪರಿಚಯಸಲಾಗಿದೆ. ಪ್ರಕೃತಿ ಮತ್ತು ಮಹಿಳೆಯರ ಅದಮ್ಯ ಮನೋಭಾವಗಳ ಸಂಭ್ರಮ ನೀಡಲಿದೆ. ಈ ಸಂಗ್ರಹದಲ್ಲಿ ಪ್ರತಿಯೊಂದು ಆಭರಣವನ್ನು ಆಪಾರ ಕಾಳಜಿ ಮತ್ತು ನಿಖರತೆಯಿಂದ ರಚಿಸಲಾಗಿದೆ. ಇದು ಇಂದಿನ ಮಹಿಳೆಯರ ಶ್ರೇಷ್ಠತೆ ಹಾಗೂ ಅವರ ಬದ್ಧತೆಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಂದರ ತಿಂಗಳಾಯ,ಮುಸ್ತಫಾ ಎ.ಕೆ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಉಪಸ್ಥಿತರಿದ್ದರು. ಕವಿತಾ ಪ್ರಾಸ್ತಾವಿಕವಾಗಿ ಮಾತಾಡಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular