Monday, December 2, 2024
Homeಉಡುಪಿಮಲ್ಪೆ: ಬರೋಬ್ಬರಿ 250 ಕೆಜಿ ತೊರಕೆ ಮೀನು ಬಲೆಗೆ..!

ಮಲ್ಪೆ: ಬರೋಬ್ಬರಿ 250 ಕೆಜಿ ತೊರಕೆ ಮೀನು ಬಲೆಗೆ..!


ಮಲ್ಪೆ: ಅದೃಷ್ಟ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಆದರೆ ಮಲ್ಪೆ ಮೀನುಗಾರರು 250 ಕೆಜಿಯ ಭರ್ಜರಿ ತೊರಕೆ ಮೀನೊಂದನ್ನು ಭೇಟೆಯಾಡಿದ್ದಾರೆ.

ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆ.ಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು, ಇದು ಅಪರೂಪಕ್ಕೆ ಒಮ್ಮೆ ಸಿಗುವ ಭಾರಿ ಗಾತ್ರದ ತೊರಕೆ ಮೀನಾಗಿದೆ. ಕೆ.ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುವ ಈ ಮೀನು, ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದಿದೆ.
ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ 250 ಕೆಜಿ ತೂಕದ ತೊರಕೆ ಮೀನು ಅರಬ್ಬೀ ಸಮುದ್ರದ ಆಳದಲ್ಲಿ ಬಲೆಗೆ ಬಿದ್ದ ಘಟನೆ ನಡೆದಿದೆ.ಇದು ಅಪರೂಪಕ್ಕೆ ಸಿಗುವ ಭಾರಿ ಗಾತ್ರದ ಮತ್ಸ್ಯ ಎಂದು ಮೀನುಗಾರರು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular