ಮಲ್ಪೆ : ದೇಶ ವಿದೇಶದ ಪ್ರವಾಸಿಗರ ಆಕರ್ಷಣೀಯ ತಾಣವಾದ ಮಲ್ಪೆ ಬೀಚಿನಲ್ಲಿ ಪರಶುರಾಮ ಫ್ರೆಂಡ್ಸ್ ವತಿಯಿಂದ ಡಿಸೆಂಬರ್ 27ರಿಂದ 31 ರವರೆಗೆ ಐದು ದಿನಗಳ ಕಾಲ ಮಲ್ಪೆ ಫುಡ್ ಫೆಸ್ಟ್ ಎಂಬ ಆಹಾರ ಮೇಳ ನಡೆಯಲಿದೆ.
ಡಿಸೆಂಬರ್ 27ರಂದು ಸಂಜೆ ಏಳಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕೋಟ ಉದ್ಯಮಿ ಆನಂದ ಸಿ. ಕುಂದರ್, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಕಾವಲು ಪಡೆಯ ಎಂ ಸಿ ಮಿಥುನ್ ಹೆಚ್. ಎನ್. ಉದ್ಯಮಿಗಳಾದ ಆನಂದ ಪಿ. ಸುವರ್ಣ, ಸಾಧು ಸಾಲಿಯನ್, ಹರಿಯಪ್ಪ ಕೋಟ್ಯಾನ್, ಇಬ್ರಾಹಿಂ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, , ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ. ಬಂಜಾರ ಪ್ರಕಾಶ್ ಶೆಟ್ಟಿ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಮಂಜುಗಡ್ಡೆ ಘಟಕದ ಕಾರ್ಯದರ್ಶಿ ಉದಯ ಕುಮಾರ್, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ , ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ್, ಪರಶುರಾಮ್ ಫ್ರೆಂಡ್ಸ್‌ನ ಅಧ್ಯಕ್ಷ ದೇವದಾಸ್ ಸುವರ್ಣ ಮೊದಲಾದವರು
ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಂಗೀತಗಾರ ಅನುರಾಗ್ ನಾಯಕ್, ಶಾಸ್ತ್ರೀಯ ನೃತ್ಯ ಕಲಾವಿದೆ ಮಾನ್ಸಿ ಕೆ. ಕೋಟ್ಯಾನ್ ಅವರನ್ನು ಸಮಾನಿಸಲಾಗುವುದು. ಪ್ರತಿದಿನ ಸಂಜೆ ಜಿಲ್ಲೆಯ ವಿವಿಧ ಪ್ರಸಿದ್ದ ತಂಡಗಳಿಂದ ಲೈವ್ ಮ್ಯೂಸಿಕ್, ನೃತ್ಯ ಪ್ರದರ್ಶನ ನಡೆಯಲಿರುವುದು.
ಲ್ಯಾಂಟನ್ ಫೆಸ್ಟಿವಲ್
ಮಲ್ಪೆ ಬೀಚ್ ನಲ್ಲಿ ಮೊದಲ ಬಾರಿಗೆ ಎನ್ನುವಂತೆ ಡಿಸೆಂಬರ್ 31 ರಂದು ರಾತ್ರಿ 10 ಗಂಟೆಗೆ ಲ್ಯಾಟಿನ್ ಫೆಸ್ಟಿವಲ್ (ಲ್ಯಾಂಟಿನ್ ಹಬ್ಬ) ಹಮ್ಮಿಕೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಲ್ಯಾಂಟನ್‌ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುತ್ತದೆ. ಮಾತ್ರವಲ್ಲದೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಲೈವ್ ಮ್ಯೂಸಿಕ್, ಡ್ಯಾನ್ಸ್, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಡಿ. 27ರಂದು ಚೀನಾದ ಬೃಹತ್ ಲಯನ್‌ನ ಪ್ರದರ್ಶನ ನಡೆಯಲಿದೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.