Friday, March 21, 2025
Homeಉಡುಪಿ"ಮಲ್ಪೆ ಬಂದರಿನಲ್ಲಿ ನಡೆದ ಹೊಡೆದಾಟ ಪ್ರಕರಣ: 20 ವರ್ಷಗಳ ಬಳಿಕ ಆರೋಪಿ ಬಂಧನ"

“ಮಲ್ಪೆ ಬಂದರಿನಲ್ಲಿ ನಡೆದ ಹೊಡೆದಾಟ ಪ್ರಕರಣ: 20 ವರ್ಷಗಳ ಬಳಿಕ ಆರೋಪಿ ಬಂಧನ”

ಉಡುಪಿ : 20 ವರ್ಷಗಳ ಹಳೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಲ್ಪೆ ಠಾಣಾ ಪೊಲೀರು ಬಂಧಿಸಿದ ಘಟನೆ ನಡೆದಿದೆ.

ಬಂಧಿ0ತ ಆರೋಪಿಯನ್ನು ತಮಿಳುನಾಡಿನ ಶಾಂತಿ ಯೋಗರಾಜ್ ಎಂದು ಗುರುತಿಸಲಾಗಿದೆ. ಮಲ್ಪೆ ಬಂದರಿನಲ್ಲಿ ಎರಡು ಬೊಟುಗಳಲ್ಲಿ ನಡೆದ ಹೊಡೆದಾಟಕ್ಕೆ ಸಂಬ0ಧಿಸಿದ ಪ್ರಕರಣದಲ್ಲಿ ಕಳೆದ 20ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಈ ಪ್ರಕರಣದಲ್ಲಿ ಉಡುಪಿ ನ್ಯಾಯಾಲಯಕ್ಕೆ ಸುಮಾರು 20 ವರ್ಷಗಳಿಂದ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಮಲ್ಪೆಪೊಲೀಸ್ ಠಾಣಾ ಸಿಬ್ಬಂದಿ ಹೆಡ್‌ಕಾನ್ಸ್ಟೇಬಲ್ ಸುರೇಶ್ ಕುಮಾರ್ ಮತ್ತು ವಿಶ್ವನಾಥ ಎಚ್. ತಮಿಳುನಾಡಿನ ತಿರುನನ್ವೆಲ್ ಜಿಲ್ಲೆಯ ಇಡಂದಕರೈ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿದೆ.

RELATED ARTICLES
- Advertisment -
Google search engine

Most Popular