Sunday, July 14, 2024
Homeಉಡುಪಿಬರದಿಂದ ಸಾಗುತಿದೆ ಮಲ್ಪೆ ಶ್ರೀವಡಭಾಂಡ ಬಲರಾಮ ದೇಗುಲ ಪುನಃಪ್ರತಿಷ್ಠೆ ತಯಾರಿ

ಬರದಿಂದ ಸಾಗುತಿದೆ ಮಲ್ಪೆ ಶ್ರೀವಡಭಾಂಡ ಬಲರಾಮ ದೇಗುಲ ಪುನಃಪ್ರತಿಷ್ಠೆ ತಯಾರಿ

ಮಲ್ಪೆ: ಇಲ್ಲಿನ ವಡಭಾಂಡೇಶ್ವರಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಮಾ. 19ರಿಂದ 29ರವರೆಗೆ ನಡೆಯಲಿರುವ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ಮನ್ಮಹಾರಥೋತ್ಸದ ಅಂಗವಾಗಿ ದೇವಸ್ಥಾನ ಸೇರಿದಂತೆ ನಗರದ ಸುತ್ತಮುತ್ತ ಪ್ರದೇಶವನ್ನು ಪತಾಕೆ ಮತ್ತು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

ಸ್ವಯಂ ಸೇವಕರೂ ಸೇರಿದಂತೆ ಆಡಳಿತ ಸಮಿತಿ ರಸ್ತೆಗಳ ಇಕ್ಕೆಲಗಳಲ್ಲೂ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಹಾಕಿದ್ದು ವಡಭಾಂಡೇಶ್ವರ ಅಕ್ಷರಶಃ ಮದುವಣಗಿತ್ತಿಯಂತೆ ಕಾಣುತ್ತಿದೆ. ಈಗಾಗಲೇ ದೇಗಲದ ಬ್ರಹ್ಮಕಲಶೋತ್ಸವ ಸಿದ್ದತೆಗಳು ಬಹುತೇಕ ಎಲ್ಲ ಪೂರ್ಣಗೊಂಡಿವೆ.

ಪಾರ್ಕಿಂಗ್, ಸ್ವಚ್ಛತೆಗೆ ವ್ಯವಸ್ಥೆ: ಪಾರ್ಕಿಂಗ್ ಹಾಗೂ ಸ್ವಚ್ಛತೆಗೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶಾಲವಾದ ಸ್ಥಂದ ಬಲರಾಮ ವೇದಿಕೆ, ಅನ್ನಬ್ರಹ್ಮ, ಅನ್ನಛತ್ರಗಳನ್ನು ನಿರ್ಮಿಸಲಾಗಿದೆ. ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ್ ಮೂಲಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್ ತಿಳಿಸಿದ್ದಾರೆ.

ಮಹಿಳೆಯರಿಂದ ನಿತ್ಯ ಕರಸೇವೆ : ಮಹಿಳೆಯರು ಬ್ರಹ್ಮಕಲಶ ಸಂಭ್ರಮದಲ್ಲಿ ಕರಸೇವೆಯ ಮೂಲಕ ಕಾವ್ಯಗಳಲ್ಲಿ ತೊಡಗಿಕೊಂಡಿರುವುದು ವಿಶೇಷತೆಯಾಗಿದೆ. ಕರಸೇವೆ ಮಾತ್ರವಲ್ಲದೆ ಊರೂರು ಅಮಂತ್ರಣ ಪತ್ರಿಕೆ ವಿತರಣೆ, ಭಜನೆ ಹೀಗೆ ಹಲವು ರೀತಿಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಳೆ ಹೊರೆಕಾಣಿಕೆ ಮಾ. 19ರಂದು ಸಂಜೆ 4ರಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ 101 ಚೆಂಡೆ ಸೇರಿದಂತೆ ವಿವಿಧ ವೇಷಭೂಷಣದೊಂದಿಗೆ ವೈಭವದ ಶೋಭಾಯಾತ್ರೆಯಲ್ಲಿ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಸಂಜೀವಿನಿ ಮೃತ್ಯುಂಜಯ ಹೋಮ, ಸಂಜೆ ವಾಸ್ತು ಹೋಮಾದಿ ಸೇರಿದಂತೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿದೆ. ಮಾ. 19ರಿಂದ ಮಾ. 29ರ ವರೆಗೆ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿರುವುದು.

RELATED ARTICLES
- Advertisment -
Google search engine

Most Popular