Saturday, April 19, 2025
Homeರಾಷ್ಟ್ರೀಯಪತ್ನಿಯ ಜತೆ ಅಕ್ರಮ ಸಂಬಂಧ, ಗುಂಡಿ ತೋಡಿ ಬಾಡಿಗೆದಾರನನ್ನು ಜೀವಂತ ಸಮಾಧಿ ಮಾಡಿದ ವ್ಯಕ್ತಿ

ಪತ್ನಿಯ ಜತೆ ಅಕ್ರಮ ಸಂಬಂಧ, ಗುಂಡಿ ತೋಡಿ ಬಾಡಿಗೆದಾರನನ್ನು ಜೀವಂತ ಸಮಾಧಿ ಮಾಡಿದ ವ್ಯಕ್ತಿ

ಹರ್ಯಾಣ: ರೋಹ್ಟಕ್​ನ ಬಾಬಾ ಮಸ್ತ್​ನಾಥ್ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಕರಾಗಿದ್ದವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ತಮ್ಮ ಮನೆಯ ಬಾಡಿಗೆದಾರನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿರುವುದನ್ನು ಅರಿತ ಪತಿ ಜಗದೀಪ್ ನನ್ನು ಆತನ ಪತ್ನಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತ ಸಮಾಧಿ ಮಾಡಿರುವ ಘಟನೆ ಹರ್ಯಾಣದ ರೋಹ್ಟಕ್​ನಲ್ಲಿ ನಡೆದಿದೆ. ಮೊದಲು ಜಗದೀಪ್​ನನ್ನು ಸ್ನೇಹಿತರ ಸಹಾಯದಿಂದ ಅಪಹರಿಸಿದ್ದ, ನಂತರ ಹೊಲದಲ್ಲಿ 7 ಅಡಿ ಆಳದ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದ. ಕಳೆದ ವರ್ಷ ಡಿಸೆಂಬರ್​ನಲ್ಲಿ ಯೋಗ ಶಿಕ್ಷಕ ಜಗದೀಪ್ ನನ್ನು ಕೊಲೆ ಮಾಡಲಾಗಿತ್ತು.

ಆದರೆ ಸುದೀರ್ಘ ತನಿಖೆ ನಂತರ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.. ಯೋಗ ಶಿಕ್ಷಕರ ಮೃತದೇಹವನ್ನು ಸೋಮವಾರ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ರೋಹ್ಟಕ್​ನ ಬಾಬಾ ಮಸ್ತ್​ನಾಥ್ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಕರಾಗಿದ್ದವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಅಲ್ಲಿ ಬಾಡಿಗೆ ಮನೆಯ ಓನರ್​ ಜತೆ ಅಕ್ರಮ ಸಂಬಂಧ ಹೊಂದಿದ್ದರು. ಅಲ್ಲಿ ಗುಂಡಿ ತೋಡಿ ಶಿಕ್ಷನನ್ನು ಜೀವಂತ ಸಮಾಧಿ ಮಾಡಿ, ಕೊಳವೆ ಬಾವಿಗಾಗಿ ಗುಂಡಿ ತೋಡಲಾಗಿದೆ ಎಂದು ಸಬೂಬು ನೀಡಿದ್ದರು.

ಡಿಸೆಂಬರ್ 24 ರಂದು, ಹರ್ದೀಪ್ ಮತ್ತು ಅವನ ಕೆಲವು ಸ್ನೇಹಿತರು ಜಗದೀಪ್ ನನ್ನು ಅಪಹರಿಸಿ, ಕೈಕಾಲುಗಳನ್ನು ಕಟ್ಟಿ, ಚಾರ್ಕಿ ದಾದ್ರಿಯಲ್ಲಿರುವ ಗುಂಡಿ ಬಳಿ ಕರೆದೊಯ್ದು ಥಳಿಸಿದ್ದಾರೆ . ಜಮೀನಿನ ಬಳಿ ಹೋಗಿ ಜೀವಂತವಾಗಿ ಸುಟ್ಟು ಬಳಿಕ ಹೂತುಹಾಕಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಕೊಲೆಯಾದ 10 ದಿನಗಳ ನಂತರ ಜನವರಿ 3 ರಂದು, ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಜಗದೀಪ್ ನಾಪತ್ತೆ ದೂರು ದಾಖಲಾಗಿತ್ತು.

ಸ್ವಲ್ಪ ಸಮಯದ ಹಿಂದೆ ಜಗದೀಪ್ ಅವರ ಕರೆ ದಾಖಲೆಗಳನ್ನು ಪರಿಶೀಲಿಸುವವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಇದಾದ ನಂತರ, ಹರ್ದೀಪ್ ಮತ್ತು ಅವನ ಸ್ನೇಹಿತ ಧರ್ಮಪಾಲ್ ರನ್ನು ಬಂಧಿಸಲು ಸಾಕಷ್ಟು ಪುರಾವೆಗಳು ದೊರೆತವು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ, ಇಬ್ಬರೂ ಕೊಲೆಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು.

ಮೂರು ತಿಂಗಳ ನಂತರ ಶವ ಪತ್ತೆಯಾಗಿದೆ ಕೊಲೆಯಾಗಿ ಸರಿಯಾಗಿ ಮೂರು ತಿಂಗಳ ನಂತರ ಸೋಮವಾರ (ಮಾರ್ಚ್ 24) ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇತರ ಆರೋಪಿಗಳಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಮರಣೋತ್ತರ ಪರೀಕ್ಷೆ ಮುಗಿದಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಪರಾಧ ತನಿಖಾ ಸಂಸ್ಥೆ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular