Thursday, July 25, 2024
Homeಅಂತಾರಾಷ್ಟ್ರೀಯಕುರಾನ್‌ಗೆ ಅವಮಾನ: ವ್ಯಕ್ತಿಯನ್ನು ಠಾಣೆಯಿಂದ ಹೊರಗೆಳೆದು ಬೆಂಕಿ ಹಚ್ಚಿ ಕೊಂದ ದುಷ್ಕರ್ಮಿಗಳು; ಪೊಲೀಸ್‌ ಠಾಣೆಗೂ ಬೆಂಕಿ

ಕುರಾನ್‌ಗೆ ಅವಮಾನ: ವ್ಯಕ್ತಿಯನ್ನು ಠಾಣೆಯಿಂದ ಹೊರಗೆಳೆದು ಬೆಂಕಿ ಹಚ್ಚಿ ಕೊಂದ ದುಷ್ಕರ್ಮಿಗಳು; ಪೊಲೀಸ್‌ ಠಾಣೆಗೂ ಬೆಂಕಿ

ಇಸ್ಲಾಮಾಬಾದ್:‌ ಕುರಾನ್‌ಗೆ ಅವಮಾನಿಸಿದ್ದಾನೆಂದು ವ್ಯಕ್ತಿಯೊಬ್ಬನನ್ನು ಉದ್ರಿಕ್ತ ಗುಂಪೊಂದು ಜೀವಂತ ದಹನ ಮಾಡಿದ ಘಟನೆ ನಡೆದಿದೆ. ಅಲ್ಲದೆ ಠಾಣೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಬಗ್ಗೆಯೂ ವರದಿಯಾಗಿದೆ. ಪಾಕಿಸ್ತಾನದ ಖೈಬರ್‌ ಪಖ್ತುನ್‌ ಖಾವಾದ ಸ್ವಾತ್‌ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಗಳು ತಿಳಿಸಿವೆ.
ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿವೆ. ಪಂಜಾಬ್‌ನ ಸಿಯಾಲ್‌ಕೋಟ್‌ನ ವ್ಯಕ್ತಿ ಗುರುವಾರ ರಾತ್ರಿ ಕುರಾನ್‌ನ ಕೆಲವು ಪುಟಗಳಿಗೆ ಬೆಂಕಿ ಹಚ್ಚಿದ್ದನೆನ್ನಲಾಗಿದೆ. ಹೀಗಾಗಿ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಉದ್ರಿಕ್ತವಾದ ಗುಂಪು ಠಾಣೆ ಮೇಲೆ ದಾಳಿ ನಡೆಸಿ, ಆರೋಪಿಯನ್ನು ಹೊರಗೆಳೆದು ತಂದಿದ್ದಾರೆ. ನಂತರ ಆರೋಪಿಗೆ ಬೆಂಕಿ ಹಚ್ಚಿ ಕೊಲ್ಲಲಾಗಿದೆ. ನಂತರ ಠಾಣೆಗೂ ಬೆಂಕಿ ಹಚ್ಚಲಾಗಿದೆ.
ಘಟನಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular